ವಿಟ್ಲ ಪಡ್ನೂರ್ ಮಹಾ ಶಕ್ತಿ ಕೇಂದ್ರ ಮಹಿಳಾ ಮೋರ್ಚಾದ ವತಿಯಿಂದ ಹತ್ತನೇ ತರಗತಿಯಲ್ಲಿ 593 ಅಂಕ ಪಡೆದು ಉತ್ತೀರ್ಣಳಾದ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿನಿ ಅನ್ವಿತಾಳಿಗೆ ಸನ್ಮಾನ – ಕಹಳೆ ನ್ಯೂಸ್
ಕಲ್ಲಡ್ಕ: ಸನ್ಮಾನ್ಯ ನರೇಂದ್ರ ಮೋದಿಜಿ ಯವರ ಸಾರ್ಥಕತೆಯ ಆಡಳಿತದಲ್ಲಿ 8 ವರ್ಷ ಪೂರೈಸಿದ ಸುಸಂದರ್ಭದಲ್ಲಿ ವಿಟ್ಲ ಪಡ್ನೂರ್ ಮಹಾ ಶಕ್ತಿ ಕೇಂದ್ರ ಮಹಿಳಾ ಮೋರ್ಚಾದ ವತಿಯಿಂದ ವೀರಕಂಬ ಗ್ರಾಮದ ಕೇಪುಲಕೋಡಿ ಶ್ರೀಧರ ಪೂಜಾರಿ ಮತ್ತು ಶಶಿಕಲಾ ದಂಪತಿಗಳ ಮಗಳಾದ ಕುಮಾರಿ ಅನ್ವಿತಾಳಿಗೆ ಹತ್ತನೇ ತರಗತಿಯಲ್ಲಿ 593 ಅಂಕ ಪಡೆದು ಶ್ರೀ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರಕ್ಕೆ ಮತ್ತು ಊರಿಗೆ ಹೆಸರು ತಂದು ಕೊಟ್ಟ ವಿದ್ಯಾರ್ಥಿನಿಯನ್ನು ಅವಳ ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೀರಕಂಬ ಮಜಿ ಸರಕಾರಿ ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥ ಸಂತೋಷ ಕುಮಾರ್ ಶೆಟ್ಟಿ ಅರೆಬೆಟ್ಟು ಮತ್ತುಜಾಗರಣ ವೇದಿಕೆ ಪ್ರಮುಖರಾದ ರತ್ನಕರ ಶೆಟ್ಟಿ ಕಲ್ಲಡ್ಕ ಅವರು ವಿದ್ಯಾರ್ಥಿಯ ಮುಂದಿನ ಶಿಕ್ಷಣಕ್ಕಾಗಿ ನೀಡಿದ ಸಹಾಯ ಧನ ವನ್ನು ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾದ ಪ್ರದಾನ ಕಾರ್ಯದರ್ಶಿಗಳಾದ ಸೀಮಾ ಮಾದವ, ಲಖಿತ ರತ್ನಾಕರ ಶೆಟ್ಟಿ ಕಲ್ಲಡ್ಕ,ಗೊಳ್ತಾಮಜಲ್ ಪಂಚಾಯತ್ ಸದಸ್ಯೆ ಪ್ರೇಮ, ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪಂಚಾಯತ್ ಸದಸ್ಯೆ ಜಯಂತಿ ಜನಾರ್ಧನ್ , ಜಯಂತಿ ಡಿಕಯ್ಯ ಪೂಜಾರಿ, ವೀರಕಂಬ ಮಜಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರ, ವೀರಕಂಬ ಬೂತ್ ಸಮಿತಿಯ ಅಧ್ಯಕ್ಷ ಪ್ರಕಾಶ್ ಪೂಜಾರಿ, ಕಾರ್ಯದರ್ಶಿ ದಿನೇಶ್ ಆಚಾರ್ಯ, ಮುಂತಾದವರು ಉಪಸ್ಥಿತರಿದ್ದರು.