Recent Posts

Sunday, January 19, 2025
ಸುದ್ದಿ

ಕುಸಿಯುವ ಹಂತದಲ್ಲಿದೆ ಕಡಬದ ಸರಕಾರಿ ಕಾಲೇಜು ಹಳೆಕಟ್ಟಡ ; ಸಮಸ್ಯೆ ಸ್ಪಂದಿಸುವವರು ಯಾರು ? – ಕಹಳೆ ನ್ಯೂಸ್

ಕಡಬ: ರಾಜ್ಯದಲ್ಲಿ ಸರಕಾರಿ ಶಾಲೆಗಳನ್ನು, ಕಾಲೇಜುಗಳನ್ನು ಉಳಿಸಬೇಕು ಎನ್ನುವ ಮಾತುಗಳು ಆಗಾಗ ಕೇಳಿಬರುತ್ತಲೇ ಇರುತ್ತದೆ. ಆದರೆ ಇದು ಅನುಷ್ಠಾನಗೊಳ್ಳುವುದು ತೀರಾ ಅಪರೂಪ. ಇರುವ ಸರ್ಕಾರಿ ಶಾಲೆಗಳು ಸೂಕ್ತ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪುತ್ತಿವೆ. ಇದಕ್ಕೊಂದು ಉದಾಹರಣೆ ಕಡಬದ ಸರಕಾರಿ ಪದವಿ ಪೂರ್ವ ಕಾಲೇಜಿನ ಹಳೆಯ ಕಟ್ಟಡ.

ಕರಾವಳಿಯಲ್ಲಿ ಕೆಲವು ದಿನಗಳಿಂದ ಸುರಿದ ಬಾರಿ ಮಳೆಗೆ ಕಡಬದ ಸರಕಾರಿ ಪದವಿ ಪೂರ್ವ ಕಾಲೇಜಿನ ಹಳೆಯ ಕಟ್ಟಡದ ಮೂಲೆ ಕುಸಿದೂ ಕಟ್ಟಡ ಬೀಳುವ ಹಂತದಲ್ಲಿದೆ. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕಟ್ಟಡ ಇದಾಗಿದ್ದು ಕಾಲೇಜು ವಿಭಾಗದಲ್ಲಿ ಕಟ್ಟಡದ ಕೊರತೆಯಿಂದ ಇಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ತರಗತಿಗಳು ಇತ್ತೀಚಿನವರೆಗೂ ನಡೆಯುತ್ತಿತ್ತು. ಕಳೆದ ದಿನಗಳಲ್ಲಿ ಸುರಿದ ಬಾರಿ ಮಳೆಗೆ ಕಟ್ಟಡ ಬೀಳುವ ಸಂಭವ ಕಂಡು ತರಗತಿಯನ್ನು ಸ್ಥಳಾಂತರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳೆದ ಕೆಲವು ವರ್ಷಗಳಿಂದ ಕಾಲೇಜು ವಿಭಾಗದಿಂದ ಹಾಗೂ ಪ್ರಾಚಾರ್ಯರಿಂದ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಬಂದು ಪರಿಶೀಲಿಸಿದ್ದಾರೆಯೆ ಹೊರತು ಯಾವುದೇ ಫಲಶ್ರುತಿ ಆಗಿಲ್ಲ. ಇದೀಗ ಕಟ್ಟಡ ಬೀಳುವ ಹಂತದಲ್ಲಿದ್ದು ಕಟ್ಟಡ ಬಿದ್ದಲ್ಲಿ ಈ ಕಟ್ಟಡಕ್ಕೆ ತಾಗಿಕೊಂಡಿರುವ ಕಟ್ಟಡಕ್ಕೂ ಹಾನಿಯಾಗುವ ಸಂಭವ ಇದೆ. ಇದರಿಂದ ಪಕ್ಕದಲ್ಲೇ ಇರುವ ಕಾಲೇಜು ವಿಭಾಗ ಹಾಗೂ ಪ್ರೌಢಶಾಲಾ ವಿಭಾಗದ ಮಕ್ಕಳು ಹೆದರಿಕೊಂಡೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಅತ್ಯುನ್ನತ ಶಿಕ್ಷಣ ನೀಡುವ ಮೂಲಕ ಹೆಸರು ಗಳಿಸಿರುವ ಕಡಬದ ಸರಕಾರಿ ಪದವಿ ಪೂರ್ವ ಕಾಲೇಜು ಈ ಬಾರಿ ಕಡಬದಲ್ಲಿ ಕಾಲೇಜು ವಿಭಾಗದಲ್ಲಿ ಅತೀ ಹೆಚ್ಚು ದಾಖಲಾತಿ ಹೊಂದುವ ಮೂಲಕ ತನ್ನ ಶಿಕ್ಷಣ ಮಟ್ಟವನ್ನು ತಿಳಿಸಿದೆ. ಆದರೂ ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ ಶಿಕ್ಷಣ ಪ್ರೇಮಿಗಳಿಗೆ ಬೇಸರ ತಂದಿದೆ.