ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ, ಪುತ್ತೂರು ಗ್ರಾಮಾಂತರ ಮಂಡಲ ಮಹಾಶಕ್ತಿ ಕೇಂದ್ರ ಉಪ್ಪಿನಂಗಡಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರಕಾರ 8 ವರ್ಷ ಪೂರ್ಣಗೊಳಿಸಿದ ಸಂಭ್ರಮಾಚರಣೆ : ವೃತಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ – ಕಹಳೆ ನ್ಯೂಸ್
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ, ಪುತ್ತೂರು ಗ್ರಾಮಾಂತರ ಮಂಡಲ ಮಹಾಶಕ್ತಿ ಕೇಂದ್ರ ಉಪ್ಪಿನಂಗಡಿ ಇದರ ವತಿಯಿಂದ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರಕಾರ 8 ವರ್ಷ ಪೂರ್ಣಗೊಳಿಸಿದ ಸಂಭ್ರಮಾಚರಣೆಯ ಪ್ರಯುಕ್ತ, ಸೇವೆ ಸುಶಾಸನ, ಬಡವರ ಕಲ್ಯಾಣ ಕಾರ್ಯಕ್ರಮದಡಿ ವೃತಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆದಿದೆ.
ಉಪ್ಪಿನಂಗಡಿಯ ಸಿಎ.ಬ್ಯಾಂಕ್ ಸಂಗಮ ಸಭಾಭವನದಲ್ಲಿ ಕಾರ್ಯಕ್ರಮ ನಡೆದಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಕಾರ್ಯಕ್ರಮದಲ್ಲಿ ಬಿಜೆಪಿಯ 8 ವರ್ಷಗಳ ಕಾರ್ಯ ವೈಖರಿ ಬಗ್ಗೆ ವಿವರಿಸಲಾಯಿತು. ಬಳಿಕ ವೃತ್ತಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆದಿದೆ.
ಇನ್ನು ಕಾರ್ಯಕ್ರಮದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರು ಆರ್. ಸಿ. ನಾರಾಯಣ್ , ಪುತ್ತೂರು ಮಂಡಲದ ಬಿಜೆಪಿ ಯ ಅಧ್ಯಕ್ಷರು ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಹಿಂದುಳಿದ ಮೋರ್ಚಾ ನಗರದ ಅಧ್ಯಕ್ಷರು ಮೋನಪ್ಪ ದೇವಸ್ಯ, ಪುತ್ತೂರು ಬಿಜೆಪಿ ಹಿಂದುಳಿದ ಮೋರ್ಚಾ ಮಂಡಲದ ಅಧ್ಯಕ್ಷರು ಸುನಿಲ್ ಕುಮಾರ್ ದಡ್ಡು, ಪುತ್ತೂರು ಮಂಡಲದ ಬಿಜೆಪಿ ಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಮೀನಾಕ್ಷಿ ಮಂಜುನಾಥ್, ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಬಿಜೆಪಿ ಯ ಅಧ್ಯಕ್ಷರು ಮುಕುಂದ ಬಜತ್ತೂರು, ಹಿಂದುಳಿದ ಮೋರ್ಚಾ ದ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಸಂಚಾಲಕರು ಪ್ರಸಾದ್ ಭಂಡಾರಿ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಷಾ ಚಂದ್ರ ಮುಳಿಯ, ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಪ್ರಶಾಂತ್. ಎನ್ ಭಾಗಿಯಾಗಿದ್ದರು.
ಸಭೆಯಲ್ಲಿ ಪ್ರಮುಖರಾದ ಉಪ್ಪಿನಂಗಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರು ಆನಂದ ಕುಂಟಿನಿ, ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಸೈನಿಕ ಪ್ರಕೋಷ್ಠದ ಸಂಚಾಲಕರು ಚಂದಪ್ಪ ಮೂಲ್ಯ, ಹಿರಿಯರ ಪ್ರಕೋಸ್ತದ ಸಂಚಾಲಕರು ಉಮೇಶ್ ಶೆಣೈ, ಶೌಕತ್ ಆಲಿ ಸಂತೋಷ ಪಾರಂಡಾಜೆ, ಜಯಂತ್ ಪುರೋಳಿ ಸುಜಾತ ಕೃಷ್ಣ ಆಚಾರ್ಯ, ರವೀಂದ್ರ ಕಾಂಚನ, ಚಿದಾನಂದ ಆಚಾರ್ಯ, ಪ್ರವೀಣ್ ಪುಣಚ, ಸದಾನಂದ ಮಣಿಯಾನಿ, ತಿಮ್ಮಪ್ಪ ಪೂಜಾರಿ, ಗೋಪಾಲ ಪೆರುವಾಯಿ, ಶೀನಪ್ಪ ಕುಲಾಲ್, ಸುಬ್ರಾಯ ಇನ್ನಿತರರು ಉಪಸ್ಥಿತರಿದ್ದರು
ಕಾರ್ಯಕ್ರಮದ ನಿರೂಪಣೆಯನ್ನು ಸುರೇಶ್ ಅತ್ರಮಜಲು ನಿರ್ವಹಿಸಿದರು , ಅಭಿನಂದನೆಯನ್ನು ಸುನಿಲ್ ಕುಮಾರ್ ದಡ್ಡು ನಡೆಸಿಕೊಟ್ಟರು , ಗೌರವಾರ್ಪಣೆ ಯ ನಿರೂಪಣೆಯನ್ನು ಉಪ್ಪಿನಂಗಡಿ ಹಿಂದುಳಿದ ವರ್ಗಗಳ ಮೋರ್ಚಾದ ಸಹಸಂಚಾಲಕರು ಸಪ್ನ ಜೀವನ್ ಗಾಣಿಗ ನೆರವೇರಿಸಿದರು , ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರತಿನಿಧಿ ಸೌಮ್ಯ ನೂಜಿ ಧನ್ಯವಾದ ಅರ್ಪಿಸಿದರು. ಹಾಗೂ ಪ್ರಾರ್ಥನೆಯನ್ನು ರಶ್ಮಿ ಆಚಾರ್ಯ ನೂಜಿ ನಡೆಸಿಕೊಟ್ಟರು