Recent Posts

Sunday, January 19, 2025
ಸುದ್ದಿ

‘ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ನನಗೆ ಫೋನ್ ಮಾಡೋದೆ ಬೈಯೋದಿಕ್ಕೆ’ ಸಚಿವೆ ಶೋಭಾ ಕರಂದ್ಲಾಜೆ- ಕಹಳೆ ನ್ಯೂಸ್

ಕುಂದಾಪುರ: ‘ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿಯವರು ಫೋನ್ ಮಾಡುತ್ತಾರೆ ಅಂದ್ರೆ ಬೈತಾರೆ ಅಂತ ಲೆಕ್ಕ’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮಾಜಿನ ಶಾಸಕ ಎಜಿ ಕೊಡ್ಗಿಯವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಎಜಿ ಕೊಡ್ಗಿಯವರ ರಾಜಕೀಯ ಜೀವನದ ಕಾರ್ಯವೈಖರ್ಯವನ್ನು ಮೇಲುಕು ಹಾಕಿದ ಸಚಿವೆ, ‘ಚಿಕ್ಕ ವಯಸಲ್ಲಿ ರಾಜಕೀಯ ಜೀವನ ಆರಂಭಿಸಿದ ಇವರು ಅಭಿವೃದ್ಧಿಯ ಕನಸುಗಾರರಾಗಿದ್ದರು. ನೀರಿನ ಸೌಲಭ್ಯಕ್ಕಾಗಿ ದಶಕಗಳ ಪ್ರಯತ್ನ ಮಾಡಿದವರು, ಸೌಭಾಗ್ಯ ಸಂಜೀವಿನಿ, ಸುವರ್ಣ ನದಿಯನ್ನು ಎಲ್ಲಾ ನದಿಗಳ ಜೊತೆ ಸೇರಿಸುವ ಕನಸು ಕಂಡವರು. ನಾನು ರಾಜಕೀಯ ಜೀವನ ಆರಂಭಿಸಿದ್ದು ಇವರ ಕೈಕೆಳಗೆ. ಭಾರತೀಯ ಕಿಸನ್ ಸಂಘದಲ್ಲಿ ನಾನು ಕೆಲ್ಸ ಮಾಡುತ್ತಿದ್ದೆ, ಇದನ್ನು ನೋಡಿ ಇದ್ದಕ್ಕಿದ್ದಂತೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಘೋಷಣೆ ಮಾಡಿದರು. 15 ದಿನಗಳ ಹಿಂದೆ ಕರೆ ಮಾಡಿದ್ರು. ‘ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ನನಗೆ ಫೋನ್ ಮಾಡೋದೆ ಬೈಯೋದಿಕ್ಕೆ’ ಇದರ ಅರ್ಥ ಕೋಡ್ಗಿಯವರಿಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇದೆ ಎಂದು. 94 ರ ವಯಸ್ಸಲ್ಲೂ ಅವರ ಉತ್ಸಾಹ ಕುಗ್ಗಿರಲಿಲ್ಲ’ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು