Friday, September 20, 2024
ಸುದ್ದಿ

ತನ್ನ ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ನೀಡಿ ಪರಿಸರ ಪ್ರೇಮ ಮೆರೆದ ಬಜರಂಗದಳದ ಮುಖಂಡ ಮುರಳಿಕೃಷ್ಣ ಹಸಂತ್ತಡ್ಕ – ಕಹಳೆ ನ್ಯೂಸ್

ಪುತ್ತೂರು : ಮದುವೆ ಸಮಾರಂಭಗಳಲ್ಲಿ ವಿಶಿಷ್ಟ ಆಚರಣೆಗಳು ನಡೆಯುತ್ತಿರುವುದು ಇಂದು ಸಾಮಾನ್ಯವಾಗಿದ್ದು, ಮಂಗಳೂರಿನಲ್ಲಿ ನೂತನ ದಂಪತಿಗಳು ಮದುವೆಗೆ ಆಗಮಿಸಿದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿ ಪರಿಸರ ಪ್ರೇಮ ಮೆರೆದಿದ್ದಾರೆ.

ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದಲ್ಲಿ ಇಂದು ನಡೆದ ಮದುವೆ ಎಲ್ಲರ ಗಮನ ಸೆಳೆಯಿತು. ಬಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕರವರ ವಿವಾಹವು ಪುಣಚದ ಮಹಿಷಮರ್ದಿನಿ ಸಭಾಂಗಣದಲ್ಲಿ ನಡೆದಿತ್ತು. ಈ ವೇಳೆ ಮದುವೆಗೆ ಆಗಮಿಸಿದ ಅತಿಥಿಗಳಿಗೆ ದಂಪತಿ ಬೆಲೆಬಾಳುವ ರಕ್ತಚಂದನ, ಶ್ರೀಗಂಧ ಹಾಗೂ ಅನೇಕ ಮರದ ಗಿಡಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಉಳಿಸುವ ದೃಷ್ಠಿಯಿಂದ ದಂಪತಿಯು ಈ ಯೋಜನೆಯನ್ನು ಹಾಕಿಕೊಂಡಿದ್ದರು. ಈ ವೇಳೆ ಅತಿಥಿಗಳಿಗೆ ಗಿಡಗಳನ್ನು ಕೊಟ್ಟು ಪೋಷಿಸಲು ಪ್ರೇರೆಪಿಸಿದ್ದಾರೆ. ಇವರ ಈ ಕಾರ್ಯವು ಪರಿಸರ ರಕ್ಷಣೆಗೆ ಮಾದರಿಯಾಗಿದೆ. ಮದುವೆಗೆ ಬಂದ ಸಾವಿರಾರು ಅತಿಥಿಗಳು ಗಿಡಗಳನ್ನು ಹೊತ್ತೊಯ್ದಿದ್ದು ವಿಶೇಷವಾಗಿತ್ತು.

ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಶೀರ್ವದಿಸಿದರು.

ಮದುವೆ ಸಮಾರಂಭಕ್ಕೆ ಡಾ.ಕಲ್ಲಡ್ಕ ಪ್ರಭಾಕರ್ ಭಟ್ , ಗೋಪಾಲ್ ಜೀ, ನೂತನ ಶಾಸಕರಾದ ರಾಜೇಶ್ ನಾಯಕ್ , ಸಂಜೀವ ಮಠಂದೂರು, ಹರೀಶ್ ಪೂಂಜ , ಅಂಗಾರ, ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗಿಗಳಾಗಿದ್ದರು.