Recent Posts

Sunday, January 19, 2025
ಪುತ್ತೂರು

ಕೋಳಿಫಾರಂ ಬಾತ್ ರೂಮ್ ನಲ್ಲಿ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ;ವಿಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್; ಆರೋಪಿ ಉಮ್ಮರ್ ವಿರುದ್ಧ ಪ್ರಕರಣ ದಾಖಲು-ಕಹಳೆ ನ್ಯೂಸ್

ಪುತ್ತೂರು: ಕೋಳಿ ಫಾರ್ಮ್‌ನಲ್ಲಿ ಕೆಲಸಕ್ಕಿರುವ ಮಹಿಳೆಯ ಮೇಲೆ ಆ ಫಾರ್ಮ್‌ ನ ರೈಟರ್‌ ಅತ್ಯಾಚಾರ ನಡೆಸಿ , ಕೃತ್ಯವನ್ನು ವಿಡಿಯೋ ಚಿತ್ರಿಕರಿಸಿ ಮತ್ತೆ ಮತ್ತೆ ಸಹಕರಿಸುವಂತೆ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿಸಿ ಪುತ್ತೂರಿನ ಗ್ರಾಮಾಂತರ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.

ಅರಿಯಡ್ಕ ಗ್ರಾಮದ ಮಡ್ಯಂಗಳದಲ್ಲಿರುವ ಕೋಳಿ ಫಾರ್ಮ್‌ನಲ್ಲಿ ರೈಟರ್ ಆಗಿರುವ ಉಮ್ಮರ್ ಈ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೇ.5 ರಂದು ಸಂತ್ರಸ್ತೆಯು ಕೋಳಿ ಫಾರ್ಮಿನ ಬಾತ್‌ರೂಮ್‌ನಲ್ಲಿದ್ದ ವೇಳೆ ಆಲ್ಲಿಗೆ ಬಂದ ಆರೋಪಿ ಉಮ್ಮರ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಕೆ ಈ ವೇಳೆ ಜೋರಾಗಿ ಕಿರುಚಾಡಿದ್ದು, ಈ ವೇಳೆ ಆಕೆಯ ಬಾಯಿಯನ್ನು ತನ್ನ ಕೈಗಳಿಂದ ಬಲವಂತವಾಗಿ ಮುಚ್ಚಿದ್ದಾನೆ. ಈ ಪೈಶಾಚಿಕ ಕೃತ್ಯದ ಬಗ್ಗೆ ಮಹಿಳೆಯು ತನ್ನ ಗಂಡನಲ್ಲಿ ತಿಳಿಸುವುದಾಗಿ ಆರೋಪಿಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅತ್ಯಾಚಾರ ನಡೆಸಿದ ಬಳಿಕ ಅದನ್ನು ವಿಡಿಯೋ ಚಿತ್ರೀಕರಿಸಿ ಆರೋಪಿಯು ಮಹಿಳೆಯ ಪತಿಗೆ ಕಳುಹಿಸಿದ್ದು, ಅತ್ಯಾಚಾರ ಎಸಗಿರುವ ಬಗ್ಗೆ ಹೊರಗೆ ತಿಳಿಸಿದರೆ ಕೊಲೆಗೈಯುವುದಾಗಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಆರೋಪಿ ಉಮ್ಮರ್‌ ವಿರುದ್ದ ಐಪಿಸಿ ಕಲಂ 376 ಹಾಗೂ ಐಟಿ ಅಕ್ಟ್‌ 67 ರಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.