Saturday, September 21, 2024
ಪುತ್ತೂರುಸುದ್ದಿ

ಭಾರತ್ ಲೈಮ್ ಬ್ರಾಂಡ್ ನ ಸುಣ್ಣ ಬಳಸದಂತೆ ಬೆಳೆಗಾರರಿಗೆ ಮನವಿ – ಕಹಳೆ ನ್ಯೂಸ್

ಭಾರತ್ ಲೈಮ್ ಎಂಬ ಬ್ರಾಂಡ್ ನ ಸುಣ್ಣವನ್ನು ಕಾಳುಮೆಣಸು, ಅಡಿಕೆ, ಕಾಫಿಯ ಕೊಳೆ ರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ತಯಾರಿಸಲು ಕೆಲವು ಬೆಳೆಗಾರರು ಬಳಸಿದ್ದರಿಂದ ಬೆಳೆಗಳ ಮೇಲೆ ದುಷ್ಪರಿಣಾಮ ಬೀರಿದ್ದು, ಅಡಿಕೆ ಫಸಲು, ಕಾಳುಮೆಣಸು ಬಳ್ಳಿಗಳು ಮತ್ತು ಕಾಫಿ ಹರಸಿನ ಬಣ್ಣಕ್ಕೆ ತಿರುಗಿ ಎಲೆ ಹಾಗೂ ಫಸಲು ಉದುರಿರುವ ಪ್ರಕರಣ ಕಂಡು ಬಂದಿದೆ.

ಇದ್ದರಿಂದ ಈ ಸುಣ್ಣವನ್ನು ಬೆಳೆಗಾರರು ಬಳಸದಂತೆ ಎಚ್ಚರವಹಿಸಬೇಕು ಎಂದು ಕೃಷಿ ಇಲಾಖೆ ತುರ್ತು ಆದೇಶ ಹೊರಡಿಸಿದ್ದು, ಈ ಬ್ರಾಂಡ್ ನ ಸುಣ್ಣ ಬಳಸದಂತೆ ಮತ್ತು ಏಜೆನ್ಸಿ ಅವರು ಮಾರಟ ಮಾಡದಂತೆ ಪ್ರಕಟಣೆ ಮೂಲಕ ತಿಳಿಸಿದೆ

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಅಧಿಕಾರಿಗಳು ಈ ಸುಣ್ಣ ಬಳಸಿ ಬೆಳೆ ನಷ್ಟಗೊಂಡಿರುವ ಬೆಳೆಗಾರರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಸುಣ್ಣದ ಮಾದರಿ ಇರುವವರು ದಯವಿಟ್ಟು ಕೆ.ವಿ.ಕೆ.ಕೇಂದ್ರದ ವಿಜ್ಞಾನಿ/ಅಧಿಕಾರಿಗಳಿಗೆ ನೀಡಿ ಅದರ ph ಮಟ್ಟ ಪರಿಶೀಲನೆ ಮತ್ತು ಬೆಳೆಗಳ ಮೇಲೆ ದುಷ್ಪರಿಣಾಮ ಬೀರಲು ಉಂಟಾಗಿರುವ ಕಾರಣ ಪತ್ತೆಹಚ್ಚಲು ಸಹಕಾರ ನೀಡಲು ಈ ಮೂಲಕ ಕೋರಲಾಗಿದೆ.

ಜಾಹೀರಾತು

ಪುತ್ತೂರು ಮೂಲದ ಈ ಸುಣ್ಣವನ್ನು ರಾಜಸ್ತಾನದಿಂದ ತರಿಸಿಕೊಂಡು ಪುತ್ತೂರಿನಲ್ಲಿ ಪ್ಯಾಕ್ ಮಾಡಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಕೊಡಗು ಬೆಳೆಗಾರ ಒಕ್ಕೂಟ ತಿಳಿಸಿದೆ