ಪುತ್ತೂರಿನಲ್ಲಿ ಬರ್ತಾ ಇದೆ ಹಲಸು ಹಾಗೂ ಹಣ್ಣಗಳ ಮೇಳ : ಹಣ್ಣು ಪ್ರಿಯರಿಗೆ ಇದೇ ಸ್ವರ್ಗ – ಬನ್ನಿ.. ಬನ್ನಿ ಹಣ್ಣಿನ ಮೇಳದಲ್ಲಿ ಬಗೆ ಬಗೆಯ ಹಣ್ಣು ಸವಿಯಿರಿ – ಕಹಳೆ ನ್ಯೂಸ್
ಮಳೆಗಾಲ ಶುರುವಾಯ್ತು ಮಳೆಗಾಲದಲ್ಲಿ ಸಿಗೋ ಹಣ್ಣು ಹಂಪಲು, ಮಳೆಗಾಲದಲ್ಲಿ ತಿನ್ನೊ ಖಾದ್ಯಗಳನ್ನ ಸವಿಬೇಕು ಅನ್ನೋರಿಗೆ ಹಲವು ಕಳೆಗಳಲ್ಲಿ ಮೇಳಗಳನ್ನ ಆಯೋಜನೆ ಮಾಡಿ ಸವಿ ನೀಡಿಲಾಗಿದೆ. ಆದ್ರೆ ಪುತ್ತೂರಿನ ಜನ ಮಾತ್ರ ನಮ್ಮೋರಿಗೂ ಈ ಮೇಳ ಆಯೋಜನೆ ಮಾಡುತ್ತಿದ್ದರೆ ಚೆನ್ನಾಗಿತ್ತು ಎಂದು ಯೋಚಿಸುತ್ತಿದ್ದರು. ಆದರೆ ಇದೀಗ ಪುತ್ತೂರಿನ ಹತ್ತೂರಿನ ಜನರಿಗೂ ಹಣ್ಣುಗಳ ಸಿಹಿ ಸವಿಯುವ ಪರ್ವ ಹತ್ತಿರವಾಗಿದೆ.
ಹೌದು ಪುತ್ತೂರಿನ ಜನರ ಬಹುನಿರೀಕ್ಷೆಯ ಹಲಸು ಮತ್ತು ಹಣ್ಣಿನ ಹಬ್ಬ ಇದೇ ಜೂನ್ ತಿಂಗಳ 25 ಮತ್ತು 26 ಶನಿವಾರ ಮತ್ತು ಭಾನುವಾರದಂದು ನಡೆಯಲಿದೆ. ನವತೇಜ ಪುತ್ತೂರು ಮತ್ತು ಜೆಸಿಐ ಪುತ್ತೂರು ಸಹಯೋಗದಲ್ಲಿ ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ದಾನದ ಶ್ರೀ ಸುಕೃತೀಂದ್ರ ಸಭಾಭವನದಲ್ಲಿ ಪುತ್ತೂರ ಹಲಸು ಮತ್ತು ಹಣ್ಣು ಮೇಳ ನಡೆಯಲಿದೆ. ಇಲ್ಲಿ ಬೇಳೆ ಹೋಳಿಗೆ, ಸೊಳೆಯ ರೊಟ್ಟಿ,ದೋಸೆ, ಮುಳುಕ್ಕ ಗಾರಿಗೆ, ಚಿಪ್ಸು, ಹಲ್ವಾ, ಉಂಡ್ಳಕಾಳು, ಹಲಸು ಐಸ್‍ಕ್ರಿಮ್ ಮಾವಿನ ಕಾಯಿ ಹೀಗೆ ಬಗೆ ಬಗೆಯ ಖಾದ್ಯ ಹಾಗೂ ಹಣ್ಣುಗಳು ಇರಲಿದೆ.
ಒಂದೇ ಸೂರಿನಡಿ ನೂರಾರು ಬಗೆಯ ಖಾದ್ಯ ಹಣ್ಣು ಹಂಪಲು, ನೀವೆಂದು ಸವಿದಿರದ, ನೀವೆಂದು ನೋಡಿರದ ಖಾದ್ಯಗಳು ಸಿಗುತ್ತೆ ಅಂದರೆ ಮಿಸ್ ಮಾಡದೆ ಹಲಸು ಮೇಳಕ್ಕೆ ಭೇಟಿ ಕೊಡಿ.