Saturday, November 23, 2024
ಕ್ರೈಮ್ದಕ್ಷಿಣ ಕನ್ನಡಪುತ್ತೂರುರಾಜಕೀಯಸುದ್ದಿ

ಗುಣರಂಜನ್ ಶೆಟ್ಟಿ ಹತ್ಯೆ ಸಂಚು ಪ್ರಕರಣ : ಉದ್ಯಮಿಗಳನ್ನು ಬೆದರಿಸಿ, ಮನ್ಮಿತ್ ಜೊತೆಸೇರಿ ಹಣ ಪೀಕುತ್ತಿದ್ದ ಆರೋಪ • ‘ ಚೋಟಾ ಸೆಟಲ್ಮೆಂಟ್ ಮ್ಯಾನ್ ‘ ಮನ್ಮಿತ್ ರೈ ಸ್ನೇಹಿತ, ಅನೂಷ್ ರೈಗೆ ಪೋಲೀಸ್ ಡ್ರಿಲ್..! – ಕಹಳೆ ನ್ಯೂಸ್

ಮಂಗಳೂರು : ಪರಿಸರವಾದಿ, ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಕೊಲೆ ಸಂಚು ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪ್ರಮುಖ ಆರೋಪಿತ ಶೋಕೀವಾಲ ಮನ್ಮಿತ್ ರೈ, ಸ್ನೇಹಿತರನ್ನು ಹಾಗೂ ಆತನೊಡನೆ ಸೇರಿ ಕುಕೃತ್ಯ ನಡೆಸುತ್ತಿದ್ದ ಒಬ್ಬೊಬ್ಬರನ್ನೇ ತನಿಖೆ ನಡೆಸುತ್ತಿದ್ದಾರೆ.

ಗುಣರಂಜನ್ ಶೆಟ್ಟಿ ಕೊಲೆ ಸಂಚು ಪ್ರಕರಣದಲ್ಲಿ ಮನ್ಮಿತ್ ರೈ ಹೆಸರು ಕೇಳಿಬರುತ್ತಿದ್ದಂತೆ ಅನೇಕ ಉದ್ಯಮಿಗಳನ್ನು ಬೆದರಿಸಿ ಹಣ ಪೀಕ್ಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದ್ದು, ಈಕುರಿತು ತನಿಖೆ ನಡೆಸಿದ ಪೋಲೀಸರೇ ಬೆಚ್ಚಿಬಿದ್ದಿದ್ದಾರೆ. ಮನ್ಮಿತ್ ರೈ ಸ್ನೇಹಿತ ಅನುಷ್ ರೈ ಎಂಬಾತನನ್ನು ವಶಕ್ಕೆ ಪಡೆದಿದ್ದ ಪೋಲೀಸರು ಗಾಬರಿಯಾಗುವ ಅಂಶ ಬೆಳಕಿಗೆ ಬಂದಿದ್ದು, ಕೆಲವು ಪುತ್ತೂರು ಮೂಲದ ಮಂಗಳೂರಿನ ಪ್ರಮುಖ ಉದ್ಯಮಿಗಳ ನಡುವಿನ ಜಗಳವನ್ನೇ ದಾಳವಾಗಿ ಮಾಡಿಕೊಂಡು ಲಕ್ಷಗಟ್ಟಲೆ ಹಣವನ್ನು ಮನ್ಮಿತ್ ಹಾಗೂ ಅನುಷ್ ಪೀಕಿದ ಬಗ್ಗೆ ಬೆಳಕಿಗೆ ಬಂದಿದ್ದು, ಆದರೆ, ಉದ್ಯಮಿಗಳು ಈತನ ವಿರುದ್ಧ ಮಾಹಿತಿ ನೀಡಿದ್ದಾರೆ ಹಾಗೂ ಪೋಲೀಸ್ ತನಿಖೆ ಮುಂದುವರೆದಿದೆ. ಈತನಿಗೆ ಪೋಲೀಸರು ಖಡಕ್ ವಾರ್ನಿಗ್ ನೀಡಿದ್ದಾರೆ ಎಂಬ ಮಾಹಿತಿ ಪೋಲೀಸ್ ಅಧಿಕೃತ ಮೂಲದಿಂದ ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅನುಷ್ ರೈ, ಮನ್ಮಿತ್ ರೈ ಜೊತೆ ಮೋಜು ಮಸ್ತಿಯಲ್ಲಿ ತೊಡಗಿರುವ Exclusive ಫೋಟೋಗನ್ನು ಕಹಳೆ ನ್ಯೂಸ್ ಕೆಲದಿನಗಳ ಹಿಂದೆ ವರದಿಮಾಡಿತ್ತು. ಮನ್ಮಿತ್ ರೈ ಜೊತೆ ಅಂಗ ರಕ್ಷಕರ ಫೋಟೋಗಳನ್ನು ಚಲನಚಿತ್ರದ ಹಾಡುಗಳೊಂದಿಗೆ ಸಂಯೋಜಿಸಿ ತಾವು ಅಂಡರ್ ವಲ್ಡ್ ಡಾನ್ ಗಳು ಎಂಬಂತೆ ಫೋಸ್ ನೀಡುತ್ತಿದ್ದ, ಮನ್ಮಿತ್ ರೈ ತಂಡದಲ್ಲಿ ಗುರುತಿಸಿಕೊಂಡಿದ್ದ ಅನುಷ್ ರೈಯನ್ನು ಅಂಡರ್ ವೇರ್ ನಲ್ಲಿ ಕೂರಿಸಿದ ಕುರಿತು, ಮಾಹಿತಿ ಹೊರಬೀಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಇತರ ಮನ್ಮಿತ್ ರೈ ಸಹಚರರು ಹಾಗೂ ಕುಕೃತ್ಯದಲ್ಲಿ ತೊಡಗುತ್ತಿದ್ದ ಸ್ನೇಹಿತರ ಫೋನ್ ಗಳು ಓಫ್ ಆಗಿದೆ. ಇನ್ನು ಅನೇಕರನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದ್ದು, ಪ್ರಮುಖ ಸರಕಾರಿ ಉದ್ಯೋಗದಲ್ಲಿರುವ ಪುತ್ತೂರು ಮೂಲದ ಒಬ್ಬ ಅಧಿಕಾರಿಯೂ ಈ ಮನ್ಮಿತ್ ಚೋಟಾ ಧಮ್ಕಿ ಗ್ಯಾಂಗ್ ನಲ್ಲಿ ಇದ್ದಾನೆ ಎಂಬ ಬಗ್ಗೆಯೂ ಪೋಲೀಸ್ ಮೂಲಗಳು ಭಲವಾದ ಸಂದೇಹ ವ್ಯಕ್ತಪಡಿಸಿದೆ. ಇನ್ನು ಥೈಲ್ಯಾಂಡ್ ನಲ್ಲಿ ತಲೆಮರೆಸಿಕೊಂಡಿರುವ ಕಿಂಗ್ ಪಿನ್ ಮನ್ಮಿತ್ ರೈ ದೇಶಕ್ಕೆ ಬಂದ ತಕ್ಷಣ ಆತನನ್ನು ಪೋಲೀಸರು ವಶಕ್ಕೆ ಪಡೆಯುವ ಎಲ್ಲಾ ಸಾಧ್ಯತೆ ಇದೆ. ಹಾಗೂ ಇದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸಮಾಜಘಾತುಕ ಕೆಲಸ ಮಾಡಿದ್ರೆ ಪೋಲೀಸರು ಬಿಡ್ತಾರಾ..!? ಒದ್ದು ಒಳಗೆ ಹಾಕ್ತಾರೆ‌ ಅಷ್ಟೇ, ಕೆಟ್ಟದಕ್ಕೆ ಹೆಚ್ಚು ಅಯಸ್ಸು ಯಾವತ್ತೂ ಇರುವುದಿಲ್ಲ ಎಂದು ಮಂಗಳೂರಿನ ಜನತೆ ಆಡಿಕೊಳ್ಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು