Sunday, January 19, 2025
ಕ್ರೈಮ್

ಆರ್ಯಪು: ರಿಜ್ವಾನ್ ಎಂಬಾತನ ಜೊತೆ ಕರು ಮಾರಾಟ, ಖರೀದಿ ವಿಚಾರವಾಗಿ ಜಗಳ: ಬಿಜೆಪಿ ಗ್ರಾಮ ಪಂಚಾಯತ್ ಸದಸ್ಯ ಸೇರಿದಂತೆ ಇಬ್ಬರ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು

ಪುತ್ತೂರು:ಕರು ಮಾರಾಟ, ಖರೀದಿ ವಿಚಾರವಾಗಿ ಜಗಳ ನಡೆದು, ಇಬ್ಬರು ಯುವಕರ ಮೇಲೆ ಹಲ್ಲೆಗೈದ ಘಟನೆ ಜೂ.20 ರಂದು ಕಲ್ಲರ್ಪೆ ಎಂಬಲ್ಲಿ ನಡೆದಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್ಯಾಪು ಗ್ರಾಮ ಪಂಚಾಯತ್ ಬಿಜೆಪಿ ಸದಸ್ಯ ಅಶೋಕ್ ನಾಯ್ಕ್ ಮತ್ತು ಅಜಿತ್ ರೈ ಕುರಿಯ ರವರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಮತ್ತು ಗಾಯಗೊಂಡ ಇಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಅಜಿತ್ ಎಂಬರಿಗೆ ಮೂರು ತಿಂಗಳ ಕರು ಎಂದು ಒಂದು ತಿಂಗಳ ಕರುವನ್ನು ರಿಜ್ವಾನ್ ಎಂಬವರು ನೀಡಿದ್ದು, ಈ ಹಿನ್ನೆಲೆ ಅಜಿತ್ ರವರು ಕರುವನ್ನು ಹಿಂತಿರುಗಿ ಕೊಂಡೊಯ್ಯುವಂತೆ ಹೇಳಿದ್ದು, ಈ ವಿಚಾರವಾಗಿ ಇಂದು ಅಜಿತ್ ರವರಿಗೆ ಅಡ್ಡ ಗಟ್ಟಿ ಹಲ್ಲೆಗೈದಿದ್ದಾರೆ ಮತ್ತು ಜೊತೆಗಿದ್ದ ಗ್ರಾಮ ಪಂಚಾಯತ್ ಸದಸ್ಯರನ್ನು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ..