Sunday, January 19, 2025
ಸುದ್ದಿ

ನವ ಬೆಳ್ತಂಗಡಿ, ಅಭಿವೃದ್ದಿಯ ಹರಿಕಾರ ಶಾಸಕ ಹರೀಶ್ ಪೂಂಜರಿAದ ಬಂದಾರು ಮಹಿಳಾ ಸಹಕಾರಿ ಸಂಘಕ್ಕೆ ೫ ಲಕ್ಷ ರೂ ಅನುದಾನ- ಕಹಳೆ ನ್ಯೂಸ್

ಬಂದಾರು: ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ನಿಯಮಿತದ ಕಟ್ಟಡ ನಿರ್ಮಾಣ, ಸಭಾಭವನ ನಿರ್ಮಾಣಕ್ಕೆ ಮತ್ತು ಆವರಣ ಗೋಡೆ ನಿರ್ಮಾಣಕ್ಕೆ ಬೆಳ್ತಂಗಡಿ ತಾಲೂಕು ಶಾಸಕ ಹರೀಶ್ ಪೂಂಜಾರವರು ೫ ಲಕ್ಷರೂ ಅನುದಾನ ನೀಡಿದ್ದಾರೆ.

ಸಂಘದಲ್ಲಿ ಪಶು ಆಹಾರ ದಾಸ್ತಾನು, ಕೊಠಡಿ ನಿರ್ಮಿಸಲು, ಸಂಘದ ಸುತ್ತಲೂ ಆವರಣ ಗೋಡೆ ನಿರ್ಮಿಸಲು ಸಂಘದ ಆಡಳಿತ ಮಂಡಲ ತೀರ್ಮಾನಿಸಿ ಕಾರ್ಯಪ್ರವೃತವಾಗಿದೆ. ಸಂಘದ ಈ ಕಾರ್ಯಕ್ಕೆ ಶಾಸಕರು ಅನುದಾನ ನೀಡಿ ಸಹಕರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮಮತಾ ಕೆ ಗೌಡ, ಉಪಾಧ್ಯಕ್ಷರಾದ ಧರ್ಮವತಿ, ಕಾರ್ಯದರ್ಶಿ ಭವ್ಯ ಗಣೇಶ್, ಸಹಕಾರಿ ಬ್ಯಾಂಕ್ ಪದ್ಮುಂಜ ಉಪಾಧ್ಯಕ್ಷರಾದ ಅಶೋಕ ಗೌಡ ಪಾಂಜಾಳ, ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಿ ಕೆ ಗೌಡ, ಪಂಚಾಯತ್ ಸದಸ್ಯರಾದ ದಿನೇಶ್ ಖಂಡಿಗ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು