Recent Posts

Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಮಹಾವಿದ್ಯಾಲಯದ ಎನ್‍ಸಿಸಿ ಘಟಕ, ಎನ್‍ಎಸ್‍ಎಸ್ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ ವಿಶ್ವಯೋಗ ದಿನಾಚರಣೆ – ಕಹಳೆ ನ್ಯೂಸ್

ಪುತ್ತೂರು : ಸುದೀರ್ಘ ಇತಿಹಾಸವನ್ನು ಹೊಂದಿರುವ ದೇಶ ಭಾರತ. ಸಾವಿರಾರು ವರ್ಷಗಳ ಹಿಂದಿನ ವಿದೇಶೀ ಆಕ್ರಮಣದ ಹೊರತಾಗಿಯೂ ದೇಶ ತನ್ನ ಸಂಸ್ಕøತಿ ಸಂಪ್ರದಾಯವನ್ನು ಕಳೆದುಕೊಳ್ಳದೆ ವಿಶ್ವಕ್ಕೆ ಮಾದರಿಯಾಗಿದೆ. ಭಾರತದ ಅನೇಕ ಶ್ರೇಷ್ಠತೆಗಳಲ್ಲಿ ಯೋಗವೂ ಒಂದು. ಪ್ರಪಂಚವೇ ಯೋಗದೆಡೆಗೆ ನಡೆದದಕ್ಕಾಗಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದ್ದೇವೆ. ಯೋಗದ ಮೂಲ ಭಾರತ ಎನ್ನುವುದು ಹೆಮ್ಮೆಯ ವಿಚಾರ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಅವರು ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಮಹಾವಿದ್ಯಾಲಯದ ಎನ್‍ಸಿಸಿ ಘಟಕ, ಎನ್‍ಎಸ್‍ಎಸ್ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗ ದಿನದ ಸಂದೇಶವನ್ನು ನೀಡಿದರು.

ಭಾರತದ ಪ್ರಾಚೀನ ಪ್ರಾಕಾರಗಳಲ್ಲಿ ಯೋಗ ಉತ್ಕøಷ್ಟವಾದದ್ದು. ‘ಮಾನವೀಯತೆಗಾಗಿ ಯೋಗ ‘ ಎಂಬ ಘೋಷಣಾ ವಾಕ್ಯದೊಡನೆ ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಲಾಗಿದೆ. ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಸಮತೋಲನಕ್ಕೆ ಯೋಗ ಸಹಕಾರಿ. ವಿಶ್ವವೇ ತಲೆಬಾಗಿರುವ ಯೋಗಕ್ಕೆ ಭಾರತ ಗುರು. ಯೋಗಾಭ್ಯಾಸದ ಉಪಯೋಗ ಹಾಗೂ ಈ ಬಗ್ಗೆ ಜಾಗೃತಿ ಮೂಡಿಸುವ ಕಾರಣದಿಂದ ಎಂಟನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ ಎನ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಪೆÇ್ರ ವಿಷ್ಣುಗಣಪತಿ ಭಟ್ ವಂದಿಸಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಈ ಸಂದರ್ಭ ಎನ್ ಸಿ ಸಿ ಮತ್ತು ಎನ್ ಎಸ್ ಎಸ್ ವಿದ್ಯಾರ್ಥಿಗಳು ಯೋಗ ದಿನದ ಪ್ರಯುಕ್ತ ಎನ್ ಸಿ ಸಿ ಘಟಕದ ಮುಖ್ಯಸ್ಥ ಲೆ. ಬಾಮಿ ಅತುಲ್ ಶೆಣೈ ಮುಂದಾಳತ್ವದಲ್ಲಿ ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿದರು.