Recent Posts

Sunday, January 19, 2025
ರಾಜಕೀಯ

Exclusive: ಸಚಿವ ಡಿಕೆಶಿಗೆ ಭಾರೀ ಸಂಕಷ್ಟ – ಐಟಿ ಇಲಾಖೆ ಕೋರ್ಟ್ ಗೆ ಕೊಟ್ಟ ಕಂಪ್ಲೆಂಟ್‍ನಲ್ಲಿ ಏನಿದೆ ಗೊತ್ತಾ? – ಕಹಳೆ ನ್ಯೂಸ್

ಬೆಂಗಳೂರು: ಐಟಿ ದಾಳಿಗೆ ಒಳಗಾಗಿರೋ ಸಚಿವ ಡಿಕೆ ಶಿವಕುಮಾರ್ ಅವರು ಸಂಕಷ್ಟಗಳ ಮೇಲೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.

`ಕನಕಪುರದ ಬಂಡೆ’ ವಿರುದ್ಧ ಐಟಿ ಅಧಿಕಾರಿಗಳು ಕೋರ್ಟ್ ಗೆ ಗುಪ್ತವಾಗಿ ದೂರು ನೀಡಿದ್ದಾರೆ. ಸಚಿವ ಡಿಕೆ ಶಿವಕುಮಾರ್ ವಿರುದ್ಧ ಐಟಿ ಅಧಿಕಾರಿಗಳು ಕೊಟ್ಟ ಕಂಪ್ಲೆಂಟ್ ಕಾಪಿ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಂಪ್ಲೇಂಟ್ ನಲ್ಲೇನಿದೆ?:
ಮಾಧ್ಯಮಗಳಲ್ಲಿ ಪ್ರತ್ಯಕ್ಷವಾದ ವರದಿಯೇ ಬೇರೆ, ಕೋರ್ಟ್ ನಲ್ಲಿ ಇರೋ ಕಾಪಿಯೇ ಬೇರೆಯಾಗಿದೆ. ಡಿಕೆಶಿಯ ಅಸಲಿಯತ್ತು ಗುಪ್ತವಾಗಿ ಸಲ್ಲಿಸಿದ್ದ ದೂರಿನಲ್ಲಿ ದಾಖಲಾಗಿದೆ. ಹಣ ಸಾಗಾಟ ಮಾಡಲಿಕ್ಕಾಗಿಯೇ ಶಿವಕುಮಾರ್ ದೊಡ್ಡ ಟೀಂ ಕಟ್ಟಿದ್ದರು. ಆಪ್ತರು ಅನ್ನಿಸಿಕೊಂಡವರೆಲ್ಲಾ ಹಣ ಸಾಗಾಟ ಮಾಡಲಿಕ್ಕಾಗಿಯೇ ಇದ್ದವರಾಗಿದ್ದಾರೆ. ಒಟ್ಟಿನಲ್ಲಿ ಈ ಟೀಂ ಯಾರಿಗೂ ಅನುಮಾನ ಬಾರದಂತೆ ಕೆಲಸ ಮಾಡುತ್ತಿತ್ತು. ಅಲ್ಲದೇ ಡಿಕೆಶಿ ಅಂಡ್ ಟೀಂ ಮೂಲಕವೇ ಕರ್ನಾಟಕದಿಂದ ಹೈಕಮಾಂಡ್‍ಗೆ ಕಪ್ಪ ಕಾಣಿಕೆ ಸಲ್ಲಿಕೆಯಾಗುತ್ತಿತ್ತು. ಸಾಕಷ್ಟು ವರ್ಷದಿಂದ ಇದನ್ನು ಮಾಡ್ತಾ ಇದ್ದಿದ್ದು ನಿಜ. ಸರ್ಕಾರಕ್ಕೆ ಈ ಟೀಂ ಮೂಲಕವೇ ತೆರಿಗೆ ವಂಚನೆ ಆಗ್ತಾ ಇತ್ತು ಅಂತ ಕೋರ್ಟ್ ಗೆ ಕೊಟ್ಟ ದೂರಿನಲ್ಲಿ ಐಟಿ ಅಧಿಕೃತವಾಗಿ ತಿಳಿಸಿದೆ.

ರೆಸಾರ್ಟ್ ನಲ್ಲಿ ಚೀಟಿ ಹರಿದು ರಾಜೇಂದ್ರನೇ ಗೊತ್ತಿಲ್ಲ ಅಂತ ಹೇಳಿದ್ದರು. ಅಲ್ಲದೇ ರಾಜೇಂದ್ರನಿಗು ನನಗೂ ಯಾವುದೇ ವ್ಯವಹಾರಿಕ ಸಂಬಂಧವೂ ಇಲ್ಲ ಅಂತಾನೂ ಹೇಳಿದ್ದರು. ಆದ್ರೆ, ಚೀಟಿಯಲ್ಲಿ ರಾಜೇಂದ್ರ-3 “ಡ್ಯೂ” ಅಂತ ಡಿಕೆಶಿ ಬರೆದಿದ್ದರು. ಇದ್ರಿಂದ ಬಲವಾದ ಸಾಕ್ಷಿಯಿದೆ. ಆದ್ರೆ, ಡಿಕೆಶಿ ಕಾಲಾವಕಾಶ ಪಡೆದು ಸಾಕ್ಷ್ಯ ನಾಶಪಡಿಸಿದ್ದಾರೆ ಎಂಬುದಾಗಿ ಉಲ್ಲೇಖಿಸಿದ್ದಾರೆ.