Monday, January 20, 2025
ಆರೋಗ್ಯರಾಜಕೀಯರಾಷ್ಟ್ರೀಯಸುದ್ದಿ

 ಕ್ಷಣ ಕ್ಷಣ ರೋಚಕ ತಿರುವು ಪಡೆದುಕೊಳ್ಳುತ್ತಿರುವ ಮಹಾರಾಷ್ಟ್ರ ರಾಜಕೀಯದ ಮಧ್ಯೆ ಮಹಾರಾಷ್ಟ್ರದ ರಾಜ್ಯಪಾಲ, ಸಿಎಂಗೆ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ಮುಂಬೈ: ಕ್ಷಣ ಕ್ಷಣ ರೋಚಕ ತಿರುವು ಪಡೆದುಕೊಳ್ಳುತ್ತಿರುವ ಮಹಾರಾಷ್ಟ್ರ ರಾಜಕೀಯದ ಮಧ್ಯೆ ಈಗ ಕೊರೊನಾ ಬಂದಿರುವುದು ಸುದ್ದಿಯಾಗಿದೆ.

ರಾಜಕೀಯ ಬಿಕ್ಕಟ್ಟು ತೀವ್ರಗೊಂಡ ಬೆನ್ನಲ್ಲೇ ರಾಜ್ಯಪಾಲ ಭಗತ್ ಸಿಂಗ್ ಮತ್ತು ಸಿಎಂ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದ ಭಗತ್ ಸಿಂಗ್ ಅವರು ಟ್ವೀಟ್ ಮಾಡುವ ಮೂಲಕ ಇದನ್ನು ದೃಢಪಡಿಸಿದ್ದಾರೆ. ಟ್ವೀಟ್‍ನಲ್ಲಿ, ನನಗೆ ಕೋವಿಡ್ ಪಾಸಿಟಿವ್ ಆಗಿದ್ದು, ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈನ ಎಚ್‍ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ರಾಜ್ಯಪಾಲರಿಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕ ಬುಧವಾರ ಮಧ್ಯಾಹ್ನ ಸಿಎಂ ಉದ್ಧವ್ ಠಾಕ್ರೆಗೂ ಕೊರೊನಾ ಬಂದಿದೆ. ಇಂದು ಉದ್ಧವ್ ಠಾಕ್ರೆ ಕ್ಯಾಬಿನೆಟ್ ಸಭೆ ನಡೆಸಬೇಕಿತ್ತು. ಆದರೆ ಕೊರೊನಾದಿಂದಾಗಿ ಅವರು ಕ್ಯಾಬಿನೆಟ್ ಸಭೆಗೆ ಆನ್‍ಲೈನ್ ಮೂಲಕ ಹಾಜರಾಗುವ ಸಾಧ್ಯತೆಯಿದೆ.

Uddhav Thackeray

ಶಿವಸೇನಾ ಶಾಸಕ ಮತ್ತು ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ತಮಗೆ 40 ಶಾಸಕರ ಬೆಂಬಲ ಇದೆ ಎಂದು ತಿಳಿಸಿರುವುದು ಮಹಾರಾಷ್ಟ್ರದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ.