Recent Posts

Sunday, January 19, 2025
ಸುದ್ದಿ

” ಯಾರಿಗಾಗಿ ನಮ್ಮವರ ಬಲಿದಾನ ” ಜುಲೈ 8 ರಂದು ಮಡಿಕೇರಿಯಲ್ಲಿ ಯೋಧನಮನ ಕಾರ್ಯಕ್ರಮ ; ನಟಿಸುವವರು ಹೀರೋಗಳಾಗುವುದಾದರೆ ಗತಿಸಿ ಹೋದವರ್ಯಾರು ??- ಕಹಳೆ ನ್ಯೂಸ್

ಜಗತ್ತಿನ ಆಧುನಿಕ ಕಾಲಭದ್ರ ಯಾರು ಅಂತ ಕೇಳಿದಾಗ, ಜಗತ್ತು ಭಾರತವನ್ನ ಬೊಟ್ಟುಮಾಡಿ ತೋರುತ್ತೆ …! ಮೇಜರ್ ಶೈತಾನಸಿಂಗರನ್ನ ನೆನೆಯುತ್ತೆ….
ಅದೇ ನಮ್ಮ ಮನೆಯ ಮಕ್ಕಳಲ್ಲಿ ಕೇಳಿದರೆ ಯಾವುದೋ ಬಾಹುಬಲಿ ಸಿನಿಮಾದ ನಟನನ್ನ ತೋರ್ತಾರೆ???
ಇದು ಈ ನೆಲದ ವಿಪರ್ಯಾಸವಲ್ಲದೇ ಮತ್ತೇನು. ಇದು ಒಂದುಕಡೆಯಾದರೆ
ಮತ್ತೊಂದು ಬದಿಯಲ್ಲಿ ತನ್ನತನವನ್ನ ದಿವಾಳಿಮಾಡಿಕೊಂಡಿರುವಂತಹ
ಮಾನಸಿಕ ಅಸ್ವಸ್ಥರ ಪಡೆಯೊಂದು
ಈ ದೇಶದ ಸೈನಿಕರನ್ನ ಅತ್ಯಾಚಾರಿಗಳು , ಹಂತಕರು ಹಾಗೇ ಹೀಗೆ ಅಂತ ಎಲುಬಿಲ್ಲದ ನಾಲಗೆಯನ್ನ ಹರಿಬಿಡ್ತಾರೆ ……
ಈ ನೆಲದ ಸೈನಿಕರು ಹಣದಾಸೆಗೋ ಕಡುಬಡತನದ ಪರಿಸ್ಥಿತಿಗೆ ಸೇನೆ ಸೇರ್ತಾರೆ ಎನ್ನುವ ಉಡಾಫೆಗಳು ಮುಗಿಲು ಮುಟ್ತಾವೆ .
ತಾನು ತನ್ನದರಗಿಂತ ಮಿಗಿಲಾಗಿ,
ರಾಷ್ಟ್ರಕ್ಕೆ ಬಲವಾಗಿ ,
ಗಿರಿಹಿಮಾಲಯದ ಶಿಖರಗಳ ಮೇಲೆ
ಕೊರೆಯುವ ಹಿಮದ ಗಾಳಿಯ ಬಂಡೆಬಿತ್ತಿಗಳ ಮೇಲೆ….
ನಮ್ಮ ಕ್ಷಣಕ್ಷಣದ ನೆಮ್ಮದಿಗಾಗಿ
ಅವನ ಕ್ಷಣಕ್ಷಣದ ಸಂತಸಗಳನ್ನ ಹರಣಮಾಡಿಕೊಂಡು ಬದುಕುತ್ತಿರುವ
ನನ್ನ ದೇಶದ ಸೈನಿಕನ ಪಾದಗಳಿಗೆ ನನ್ನ ನಮನವನ್ನ ಸಲ್ಲಿಸುತ್ತ ……
ಜೀವನವನ್ನ ಕಣ್ಣರೆಪ್ಪೆಗಳ ನಡುವಲ್ಲಿ ಅದುಮಿಟ್ಟು
ಇಂದು ನಾಳಗಳ ನಿರೀಕ್ಷೆಯಿಲ್ಲದೆ
ಸದಾ ಭಾರತಾಂಭೆಯ ಸೇವೆಯಲ್ಲಿರುವ ಅಷ್ಟೂ ಸೈನಿಕರಿಗೆ ತಾಯಿ ಭಾರತಾಂಭೆ ದೀರ್ಘ ಆಯಸ್ಸನ್ನ ಕರುಣಿಸಲಿ.
ನನ್ನ ನೆಲದ ಸೈನಿಕರ ನೆತ್ತರು ಹೀರಲು ಬರುವ ನೆತ್ತರಪಿಪಾಸುಗಳು ಈ ನೆಲದಲ್ಲಿ ನರಳಿನರಳಿ ಸಾಯಲಿ.
ಜೈ ಜವಾನ್ ಜೈ ಹಿಂದ್.

(ವಿಶೇಷಸೂಚನೆ: ಎಡಪಂಥೀಯ ಚಿಂತಕರಿಗೆ ಆಹ್ವಾನವಿರುವುದಿಲ್ಲ)

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದಿನಾಂಕ 8-7-2018ರ ಭಾನುವಾರದಂದು
ಮಡಿಕೇರಿಯ ಕೊಡವಸಮಾಜದ ಸಹಯೋಗದಲ್ಲಿ
“ಯಾರಿಗಾಗಿ ನಮ್ಮವರ ಬಲಿದಾನ” ಎಂಬ ಅರ್ಥಪೂರ್ಣ ಶೀರ್ಷಿಕೆಯಡಿಯಲ್ಲಿ ಯೋಧನಮನ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕರ್ನಲ್ ಕಂಡ್ರಗಂಡ ಸಿ‌. ಸುಬ್ಬಯ್ಯ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರಚಕ್ರ ಪುರಸ್ಕೃತ ಮೇಜರ್ ಕುಪ್ಪಂದ ಪಿ ನಂಜಪ್ಪ ಭಾಗವಹಿಸಿದ್ದು , ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಶ್ರೀಮತಿ ಶ್ರೀವಿದ್ಯ ಮತ್ತು ಕೊಡಗಿನ ಪೋಲೀಸ್ ವರಿಷ್ಠಾಧಿಕಾರಿಗಳಾದ ರಾಜೇಂದ್ರ ಪ್ರಸಾದ್ ನೆರವೇರಿಸಲಿದ್ದಾರೆ. ಮುಖ್ಯ ಭಾಷಣಗಾರಗಾಗಿ ಶ್ರೀಕೃಷ್ಣ ಉಪಾಧ್ಯಾಯ ಭಾಗವಹಿಸಲಿದ್ದಾರೆ. ಖ್ಯಾತ ಚಿಂತಕ ಅರ್ಜುನ್ ದೇವಲದಕಜೆ ಭಾಗವಹಿಸಲಿದ್ದಾರೆ.

ರಾಷ್ಟ್ರಕ್ಕಾಗಿ ಬಲಿದಾನಿಗಳಾಗಿರುವ ಹುತಾತ್ಮಯೋಧರ ಕುಟುಂಬವನ್ನ ವೇದಿಕೆಯ ಮೇಲೆ ಕರೆತರುವ ಸಣ್ಣದೊಂದು ಪ್ರಯತ್ನ.
ಇದರ ಜೊತೆಯಲ್ಲಿಯೇ ಗಾಯಾಳುಗಳಾಗಿ ನಮ್ಮನಿಮ್ಮಗಳ ನಡುವಲ್ಲಿರುವ ಸೈನಿಕರನ್ನ ವೇದಿಕೆಯ ಮೇಲೆ ಕರೆತಂದು ಸನ್ಮಾನಿಸುವ ಪ್ರಯತ್ನ.
ರಾಷ್ಟ್ರಾಭಿಮಾನಿಗಳಿಗೆ ವಿಶೇಷವಾದ ಸ್ವಾಗತಗಳಿರುತ್ತದೆ.