Sunday, January 19, 2025
ಸುದ್ದಿ

ಪಶು ಇಲಾಖೆ ಹಾಗೂ ಆಹಾರ ಇಲಾಖೆಯ ವಾಹನಗಳ ನಡುವೆ ಡಿಕ್ಕಿ : ಕೊರಟಗೆರೆಯಲ್ಲಿ ತಪ್ಪಿದ ಭಾರಿ ಅನಾಹುತ – ಕಹಳೆ ನ್ಯೂಸ್

ಕೊರಟಗೆರೆ ತಾಲ್ಲೂಕಿನ ಬೆಂಗಳೂರು ಬೈಪಾಸ್ ರಸ್ತೆಯಿಂದ ಮಧುಗಿರಿ ಕಡೆಗೆ ಹೋಗುತ್ತಿದ್ದ ಅಕ್ಕಿ ತುಂಬಿದ ಲಾರಿಯೊಂದಕ್ಕೆ ಕೊರಟಗೆರೆ ಮಾರ್ಗದಿಂದ ಗೌರಿಬಿದನೂರು ಮಾರ್ಗದ ರಸ್ತೆಯಲ್ಲಿ ತೆರಳುತ್ತಿದ್ದ ಕೊರಟಗೆರೆಯ ಪಶು ಇಲಾಖೆಯ ಬುಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಬುಲೆರೋ ವಾಹನದ ಮುಂಭಾಗ ಜಖಂಗೊ0ಡಿದೆ. ಲಾರಿ ಚಾಲಕನ ಜಾಗರೂಕತೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಸ್ಥಳೀಯರು ತಿಳಿಸಿದರು. ೪ಕಡೆಗೆ ತಿರುಗಿರುವ ಈ ರಸ್ತೆಯಲ್ಲಿ ಯಾವುದೇ ಮುಂಜಾಗ್ರತ ನಾಮ ಫಲಕಗಳಿಲ್ಲದ ಕಾರಣ ಇಂತಹ ಅವಘಡಗಳು ಆಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು. ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ಕೈಗೊಂಡಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ – ದೇವರಾಜ್ ಕೆ.ಎನ್. ಕೊರಟಗೆರೆ

ಜಾಹೀರಾತು
ಜಾಹೀರಾತು
ಜಾಹೀರಾತು