ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನ ಆಚರಣೆ: ವಿಶ್ವದ ಆರೋಗ್ಯಕ್ಕಾಗಿ ಅಂತರಾಷ್ಟ್ರೀಯ ಯೋಗ ದಿನ: ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ – ಕಹಳೆ ನ್ಯೂಸ್
ಪುತ್ತೂರು: ವಿಶ್ವ ಯೋಗ ದಿನದ ಅಂಗವಾಗಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನ ಆಚರಣೆಯು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿವೇಕಾನಂದ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಮಾತನಾಡಿ ಮಾನವನ ಅಂತಸತ್ವವನ್ನು ಅರಿಯುವ ವಿಧಾನವನ್ನು ತಿಳಿಸಿಕೊಟ್ಟ ದೇಶ ಭಾರತ. ಖುಷಿ ಸಂಸ್ಕøತಿಯ ಒಂದು ಭಾಗವೇ ಯೋಗ.
ಯೋಗ ಎಂಬುದು ನಮ್ಮ ಜ್ಞಾನದ ಅಭಿವೃದ್ಧಿಗೆ ಪೂರಕವಾದ ಕ್ರಿಯೆ. ಯೋಗದಿಂದ ಏಕಾಗ್ರತೆ ಹೆಚ್ಚುವುದಲ್ಲದೆ ನಮ್ಮ ಮಾನಸಿಕ ಮತ್ತು ದೈಹಿಕ ಕ್ಷಮತೆ ಅಭಿವೃದ್ಧಿಯಾಗುತ್ತದೆ. ಯೋಗಕ್ಕಿರುವ ಅಗಾಧ ಶಕ್ತಿ ಬೇರೊಂದಿಲ್ಲ, ಸಣ್ಣ ಕಾಲಾವಧಿಯಲ್ಲೂ ಯೋಗ ಮಾಡಿ ನೆಮ್ಮದಿ ಪಡೆಯಬಹುದು. ಪರಿಪೂರ್ಣ ಜೀವನಕ್ಕೆ ಯೋಗ ಅತ್ಯಗತ್ಯ. ಮಾನವ ಕುಲದ ಏಕತೆಯ ಪರಿಕಲ್ಪನೆಗೆ ಯೋಗ ಪ್ರಾಮುಖ್ಯವಾದುದು.
ನಮ್ಮ ಆಧ್ಯಾತ್ಮದಲ್ಲಿ ಯೋಗ ಇದೆ, ನಮ್ಮ ಜೀವನ ಪದ್ದತಿಯಲ್ಲಿ ಯೋಗ ಇದೆ. ಯೋಗ ಕೇವಲ ಹಿಂದುಗಳಿಗೆ ಮಾತ್ರ ಅಲ್ಲ. ವಸುದೈವ ಕುಟುಂಬಕಂ ಅನ್ನುವ ಆದರ್ಶದಲ್ಲಿ ಇಡೀ ಪ್ರಪಂಚದ ಜನರ ಆರೋಗ್ಯ ಕಾಳಜಿಯ ಹಿನ್ನೆಲೆಯಲ್ಲಿ ಯೋಗ ಅತ್ಯಂತ ಸಹಕಾರಿ. ಇದಲ್ಲದೆ, ಯೋಗವು ನಮ್ಮ ದೇಹದ ಮೇಲೆ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ. ನಮ್ಮ ಒತ್ತಡ ಮತ್ತು ಆತಂಕವನ್ನು ಬಿಡುಗಡೆ ಮಾಡಲು ಕೂಡ ಸಹಕಾರಿ ಎಂದರು. ಅಲ್ಲದೆ ವಿವಿಧ ಆಸನಗಳನ್ನು ವಿದ್ಯಾರ್ಥಿಗಳಲ್ಲಿ ಮಾಡಿಸಿ, ಅವುಗಳ ಪ್ರಾಮುಖ್ಯತೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.