ಮನೆ ಹೊರಗಿಟ್ಟಿದ್ದ ಶಾಲಾ ಶೂಸ್ ನಲ್ಲಿ ನಾಗರಹಾವು ಪ್ರತ್ಯಕ್ಷ: ಹಾವನ್ನು ರಕ್ಷಿಸಿದ ಸ್ನೇಕ್ ಶ್ಯಾಮ್ – ಕಹಳೆ ನ್ಯೂಸ್

ಮೈಸೂರು: ಮನೆಯ ಹೊರಗೆ ಇಟ್ಟಿದ್ದ ಶಾಲಾ ಶೂಸ್ ಧರಿಸಲು ಹೋದಾಗ ನಾಗರಹಾವು ಕಾಣಿಸಿಕೊಂಡು ಅಲ್ಪದಲ್ಲಿಯೇ ಭಾರೀ ಅಪಾಯದಿಂದ ಪಾರಾಗಿರುವ ಘಟನೆ ಮೈಸೂರಿನ ಹೆಬ್ಬಾಳ್ ಎರಡನೇ ಹಂತದಲ್ಲಿ ನಡೆದಿದೆ.
ಎಂದಿನಂತೆ ಶಾಲೆಗೆ ತೆರಳಲು ಶೂಸ್ ಹಾಕಿಕೊಳ್ಳಲು ಹೋದಾಗ ನಾಗರಹಾವು ಮಕ್ಕಳ ಶೂಸ್ ಒಳಗೆ ಅಡಗಿ ಕುಳಿತಿದ್ದು, ಕಾಣಿಸಿಕೊಂಡಿದೆ. ಒಂದು ವೇಳೆ ಹಾವು ಕಾಣಿಸದೇ, ಶೂಸ್ ಪರಿಶೀಲಿಸದೇ ಹಾಕಿಕೊಂಡಿದ್ದರೆ, ಪ್ರಾಣಕ್ಕೆ ಕುತ್ತು ಬರುತ್ತಿತ್ತು.
Video Player
00:00
00:00
ಹಾವು ನೋಡಿ ಜಾಗೃತರಾದ ಮನೆಯವರು ತಕ್ಷಣ ಮೈಸೂರಿನ ಉರಗ ರಕ್ಷಕ ಸ್ನೇಕ್ ಶ್ಯಾಮ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಬಳಿಕ ಸ್ಥಳಕ್ಕಾಗಮಿಸಿದ ಸ್ನೇಕ್ ಶ್ಯಾಮ್ ಹಾವನ್ನು ರಕ್ಷಣೆ ಮಾಡಿದ್ದು, ಮಳೆಗಾಲದಲ್ಲಿ ಹಾವುಗಳು ಹೊರ ಬರುವ ಸಮಯ ಇದಾಗಿದೆ. ಬೆಚ್ಚನೆಯ ವಾತಾವರಣಕ್ಕಾಗಿ ಹೊರ ಬರುತ್ತವೆ. ಮನೆಯ ಮುಂಭಾಗ ಹಾವುಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳ ಶೂಸ್‍ಗಳು ಸೇರಿದಂತೆ ಹಲವು ವಸ್ತುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಹಿನ್ನೆಲೆ ಎಚ್ಚರದಿಂದರಲೂ ಸ್ನೇಕ್ ಶ್ಯಾಮ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.