ಮೋದಿ ಅಂದರೇನೆ ಹಾಗೆ ಅವರ ಆಡಳಿತ ವೈಖರಿ ಎಲ್ಲರಿಗಿಂತ ವಿಭಿನ್ನ! ವಿರೋದಿಗಳ ಆಟ ಹೇಗಿರುತ್ತೋ ಅದಕ್ಕೆ ತಕ್ಕಂತೆ ಆಟವಾಡುತ್ತಾರೆ ಮೋದಿ.
ಅಮೇರಿಕಾದಿಂದ ಆಮದಾಗುತ್ತಿರುವ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದ್ದು ಇದನ್ನರಿತು ಅಮೇರಿಕಾ ಟ್ಯಾರಿಫ್ ಟ್ರೇಡ್ ವಾರ್ ನೊಳಗೆ ಕಾಲಿಟ್ಟಿರಿವ ಭಾರತ ಕೂಡ ಅಮೇರಿಕಾಕ್ಕೆ ಸೆಡ್ಡು ಹೊಡೆಯಲು ತಿರ್ಮಾನಿಸಿದೆ.ಅಮೇರಿಕಾ ಈಗಾಗಲೆ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ದರ ಏರಿಕೆ ಮಾಡಿದ್ದನ್ನು ವಿರೋಧಿಸಿ ವಿಶ್ವ ವ್ಯಾಪಾರ ಸಂಸ್ಥೆಗೆ ಭಾರತ ದೂರು ಸಲ್ಲಿಸಿದೆ.
ಭಾರತ ಸರಕಾರ ಕೂಡ ಒಟ್ಟು 29 ಉತ್ಪನ್ನಗಳ ಕಸ್ಟಮ್ಸ್ ಸುಂಕ ಹೆಚ್ಚಳ ಮಾಡಲು ನಿರ್ಧರಿಸಿದ್ದು ಈ ಹೆಚ್ಚುವರಿ ತೆರಿಗೆ ಜಾರಿಯಾದರೆ ಸಿಗಡಿ ಮೀನಿನ ಮೇಲಿನ ಹೇರಿಕೆ ಆಗಸ್ಟ್4 ರಿಂದ ಜಾರಿಯಾಗುತ್ತದೆ. ಬೋರಿಕ್ ಆ್ಯಸಿಡ್ ಸಹಿತ ಕಡಲೆಬೆಳೆ, ತೊಗರಿಬೆಳೆ, ಕಡಲೆ, ಅವರೆ, ಸೇಬು, ಬಾದಾಮಿ ಸಹಿತ 30 ವಸ್ತುಗಳ ಪಟ್ಟಿಯನ್ನು ವಿಶ್ವ ವ್ಯಾಪಾರ ಸಂಸ್ಥೆಗೆ ಕಳುಹಿಸಿದೆ.
ಯಾವ ವಸ್ತುಗಳಿಗೆ ಎಷ್ಟು ತೆರಿಗೆ ಎಂದು ಮಾಹಿತಿ ನೀಡಿರುವ ಭಾರತ ಅಮೇರಿಕಾದ ಉದ್ಧಟತನಕ್ಕೆ ಸರಿಯಾಗಿ ತಿರುಗೇಟು ನೀಡಿದೆ.