Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶಿವಾಜಿ ಬಳಗ (.ರಿ) ಶ್ರೀರಾಮ ನಗರ ಮಧ್ವ ವತಿಯಿಂದ ಜು. 03ರಂದು ಕೆಸರ್‌ದ ಗೊಬ್ಬು – 2022 ಕಾರ್ಯಕ್ರಮ- ಕಹಳೆ ನ್ಯೂಸ್

ಬಂಟ್ವಾಳ : ಕುಕ್ಕೆರೋಡಿ ಗದ್ದೆಯಲ್ಲಿ ಜು03ರಂದು ತುಳುವರ ಅತೀ ನೆಚ್ಚಿನ ‘ಕೆಸರ್‌ದ ಗೊಬ್ಬು – 2022’ ಕ್ರೀಡೋತ್ಸವ ನಡೆಯಲಿದೆ. ಬೆಳಗ್ಗೆ 08:30ಕ್ಕೆ ಕ್ರೀಡೋತ್ಸವಕ್ಕೆ ಕಂಬಳ ಕೋಣಗಳು ವಿಶೇಷ ಮೆರುಗು ನೀಡಲಿದೆ. ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪ್ರಾರ್ಥಮಿಕ ವಿಭಾಗ ಹಾಗೂ ಪ್ರೌಡ ಶಾಲಾ ಮಕ್ಕಳಿಗೆ ಓಟ, ಹಾಳೆ ಓಟ, ಉಪ್ಪು ಮುಡಿ ಓಟ, ಮೂರು ಕಾಲಿನ ಓಟ, ಪುರುಷರಿಗೆ, 100 ಮೀಟರ್ ಓಟ, ಹಾಳೆ ಓಟ, ಕಬಡ್ಡಿ, ಹಗ್ಗ ಜಗ್ಗಾಟ, ಮಹಿಳೆಯರಿಗೆ 100 ಮೀ ಓಟ, ಹಾಳೆ ಓಟ, ತ್ರೋಬಾಲ್, ಹಗ್ಗ ಜಗ್ಗಾಟ ಹಮ್ಮಿಕೊಳ್ಳಲಾಗಿದೆ.

ವಿಜೇತ ತಂಡಗಳಿಗೆ ನಗದು ಹಾಗೂ ಶಿವಾಜಿ ಫಲಕ ನೀಡಿ ಗೌರವಿಸಲಾಗುವುದು. ಕಬಡ್ಡಿ, ಹಗ್ಗ ಜಗ್ಗಾಟ, ತ್ರೋಬಾಲ್ ಈ ಎಲ್ಲ ಆಟಗಳಿಗೆ 7 ಜನರನ್ನು ಒಳಗೊಂಡ ತಂಡವನ್ನು ರಚಿಸಿ ಬರತಕ್ಕದ್ದು ಎಂದು ಆಯೋಜಕರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಚ್ಚಿನ ಮಾಹಿತಿಗಾಗಿ : 9964643091, 7022560246, 7996570298

ಜಾಹೀರಾತು
ಜಾಹೀರಾತು
ಜಾಹೀರಾತು