Sunday, January 19, 2025
ದಕ್ಷಿಣ ಕನ್ನಡಸುದ್ದಿ

ಕೋರ್ಟ್ ಆದೇಶವಿದ್ದರೂ ಹಿಜಬ್‌ಗಾಗಿ ಪಟ್ಟು : ಕಾಲೇಜಿನಿಂದ ವರ್ಗಾವಣೆ ಪತ್ರ ಪಡೆದ ಮುಸ್ಲಿಂ ವಿದ್ಯಾರ್ಥಿನಿ – ಕಹಳೆ ನ್ಯೂಸ್

ಮಂಗಳೂರು: ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ ಹಿಜಬ್ ವಿವಾದದ ಬಳಿಕ ಇದೀಗ ವಿದ್ಯಾರ್ಥಿನಿಯೊಬ್ಬಳು ವರ್ಗಾವಣೆ ಪತ್ರ ಪಡೆದುಕೊಂಡಿದ್ದು, ಇಬ್ಬರು ವಿದ್ಯಾರ್ಥಿನಿಯರು ಬೇರೆ ಕಾಲೇಜು ಸೇರುವುದಕ್ಕೆ ಎನ್ ಓಸಿ ಪಡೆದುಕೊಂಡಿದ್ದಾರೆ.

ಮೂವರು ವಿದ್ಯಾರ್ಥಿನಿಯರಲ್ಲಿ ಇಬ್ಬರು ಮಂಗಳೂರು ವಿವಿ ಕಾಲೇಜಿನ ಹಿಜಬ್ ನಿಷೇಧ ಪ್ರಶ್ನಿಸಿ ಪತ್ರಿಕಾಗೋಷ್ಠಿ ನಡೆಸಿದ ಹಿನ್ನಲೆ ಅವರಿಗೆ ಕಾಲೇಜ್ ನೋಟಿಸ್ ನೀಡಿತ್ತು. ಅದರಲ್ಲಿ ಓರ್ವ ವಿಧ್ಯಾರ್ಥಿನಿ ಕಾಲೇಜು ಆಡಳಿತ ಮಂಡಳಿಯಲ್ಲಿ ಕ್ಷಮೆ ಕೋರಿ ತರಗತಿಗೆ ಹಾಜರಾಗಿದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಮತ್ತೊಬ್ಬ ವಿದ್ಯಾರ್ಥಿನಿ ಆರೋಗ್ಯ ಸಮಸ್ಯೆಯಿಂದ ಇತ್ತೀಚೆಗೆ ಟಿಸಿ ಪಡೆದಿದ್ದರು. ಅಲ್ಲದೆ ಇನ್ನೂ ಹಿಜಬ್ ಧರಿಸಲು ಅವಕಾಶ ಇಲ್ಲದ ಕಾರಣ 15 ಮಂದಿ ವಿಧ್ಯಾರ್ಥಿನಿಯರು ತರಗತಿಗೆ ಗೈರು ಹಾಜರಾಗುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು