Friday, September 20, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಒಡಿಯೂರು ಶ್ರೀಗಳ ಜನ್ಮದಿನೋತ್ಸವ, ಗ್ರಾಮೋತ್ಸವ, ಗುರುವಂದನೆಗೆ ಪುತ್ತೂರು ತಾಲೂಕು ಮಟ್ಟದ ಸ್ಪರ್ಧೆ ನಡೆಸಲು ಸಮಾಲೋಚನಾ ಸಭೆ- ಕಹಳೆ ನ್ಯೂಸ್

ಪುತ್ತೂರು: ಆಗೋಸ್ಟ್ ತಿಂಗಳಲ್ಲಿ ನಡೆಯುವ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ, ಗ್ರಾಮೋತ್ಸವ, ಗುರುವಂದನೆಯ ಅಂಗವಾಗಿ ಜುಲೈ ತಿಂಗಳಲ್ಲಿ ವಿವಿಧ ಗ್ರಾಮೀಣ ಸ್ಪರ್ಧೆಗಳನ್ನು ನಡೆಯಲಿದ್ದು, ಇದರ ಪೂರಕವಾಗಿ ಪುತ್ತೂರು ತಾಲೂಕು ಮಟ್ಟದ ಸ್ಪರ್ಧೆ ನಡೆಸಲು ಪೂರ್ವ ಸಿದ್ಧತಾ ಸಭೆಯು ಜೂ.22ರಂದು ಶ್ರೀ ಲಕ್ಷ್ಮೀ ಹೊಟೇಲ್‌ನ ಸಭಾಂಗಣದಲ್ಲಿ ನಡೆಯಿತು.

ಗುರುಸೇವಾ ಬಳಗ ಪುತ್ತೂರು ಇದರ ಅಧ್ಯಕ್ಷ ದೇವಪ್ಪ ನೋಂಡ ಅವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಒಡಿಯೂರು ಗ್ರಾಮೋತ್ಸವದ ಪ್ರಧಾನ ಕಾರ್ಯದರ್ಶಿ ಯಶವಂತ್ ವಿಟ್ಲ, ಒಡಿಯೂರು ಗ್ರಾಮ ವಿಕಾಸ ಯೋಜನಾಧಿಕಾರಿ ಕಿರಣ್ ಉರ್ವರವರು ಸ್ಪರ್ಧೆಗಳ ಮಾಹಿತಿ ನೀಡಿದರು. ಒಡಿಯೂರು ಶ್ರೀ ಸಂಸ್ಥಾನದ ಸಹಸಂಸ್ಥೆಗಳ ಸದಸ್ಯರು, ಅವರ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ, ಹಿರಿಯರಿಂದ ಹಿರಿದು ಕಿರಿಯರ ತನಕ ಸ್ಪರ್ಧೆಗಳು ನಡೆಯಲಿದ್ದು, ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿಜೇತರಿಗೆ ಒಡಿಯೂರು ಸಂಸ್ಥಾನದಲ್ಲಿ ಜು.೩೧ರಂದು ಅಂತಿಮ ಸ್ಪರ್ಧೆ ನೆಡಸಿ ಆ.8ರಂದು ಸ್ವಾಮೀಜಿಯವರ ಜನ್ಮದಿನೋತ್ಸವದಂದು ಬಹುಮಾನ ನೀಡಲಾಗುವುದು ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಸಂಘದ ನಿರ್ದೇಶಕರಾದ ಜಯಪ್ರಕಾಶ್ ರೈ, ಜತೆ ಕಾರ್ಯದರ್ಶಿಗಳಾದ ಭವಾನಿಶಂಕರ್ ಶೆಟ್ಟಿ, ನ್ಯಾಯವಾದಿ ರಾಜೇಶ್ವರಿ, ಕೋಶಾಧಿಕಾರಿ ಉದಯ ಕುಮಾರ್ ಹೆಚ್, ಸಂಘಟನಾ ಕಾರ್ಯದರ್ಶಿಗಳಾದ ಸುಧೀರ್ ನೋಂಡ, ತಾರನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಡಿಯೂರು ಗುರುದೇವಾ ಸೇವಾ ಬಳಗದ ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ಸ್ವಾಗತಿಸಿ, ಕ್ರೀಡಾ ಸಂಚಾಲಕಿ ನಯನಾ ರೈ ವಂದಿಸಿದರು. ತಾಲೂಕು ಮೇಲ್ವಿಚಾರಕಿ ಸವಿತಾ, ತಾರಾ ಸುಂದರ್ ರೈ, ಪವಿತ್ರ, ಅಶ್ವಿನಿ ರೈ, ರಂಜನಿ ಶೆಟ್ಟಿ ಉಪಸ್ಥಿತರಿದ್ದರು. ತಾಲೂಕಿನ ವಲಯಾಧ್ಯಕ್ಷರುಗಳು, ಸಂಘಟನಾ ಸಮಿತಿ ಅಧ್ಯಕ್ಷರುಗಳು, ಗ್ರಾಮ ವಿಕಾಸ ಯೋಜನೆಯ ಸಂಯೋಜಕರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು