Sunday, January 19, 2025
ಬಂಟ್ವಾಳಸಂತಾಪಸುದ್ದಿ

ನಿವೃತ್ತ ಶಿಕ್ಷಕಿ, ನೃತ್ಯ ನಿರ್ದೇಶಕಿ ಗುಣವತಿ ಎಂ ನಿಧನ – ಕಹಳೆ ನ್ಯೂಸ್

ಮೂಡುಬಿದಿರೆ : ಆಚಾರ್ಯ ಕೇರಿ ನಿವಾಸಿ, ನಿವೃತ್ತ ಶಿಕ್ಷಕಿ, ನೃತ್ಯ ನಿರ್ದೇಶಕಿ, ಗಾಯಕಿ ಗುಣವತಿ ಎಂ. (83) ಅವರು ಉಪ್ಪಿನಂಗಡಿಯಲ್ಲಿರುವ ಪುತ್ರಿಯ ಮನೆಯಲ್ಲಿ ಜೂ. 22ರಂದು ನಿಧನ ಹೊಂದಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರು ಪುತ್ರಿಯನ್ನು ಅಗಲಿದ್ದಾರೆ. 1960ರ ದಶಕದಲ್ಲಿ ಶಿಕ್ಷಕಿ ವೃತ್ತಿ ಆರಂಭಿಸಿದ್ದ ಅವರು ಹೊಸಬೆಟ್ಟು ಗ್ರಾಮದ ಹೆಗ್ಡೆಬೈಲುನಲ್ಲಿ ಹೊಸ ಶಾಲೆ ಸ್ಥಾಪನೆ, ಹೊಸಕಟ್ಟಡ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಬೆಳುವಾಯಿ ಮೈನ್, ಜ್ಯೋತಿನಗರ, ಮೂಡುಬಿದಿರೆ ಥರ್ಡ್ ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಆಂಗ್ಲ ಭಾಷೆಯಲ್ಲಿ ಉತ್ತಮ ಹಿಡಿತವಿದ್ದ ಶಿಕ್ಷಕಿಯಾಗಿದ್ದು ಗಾಯನ, ನೃತ್ಯ ಕುಶಲಿಗರಾಗಿ, ನೃತ್ಯ ರೂಪಕಗಳ ನಟ, ನಿರ್ದೇಶಕಿ, ಪ್ರಸಾಧನ, ವಸ್ತ್ರವಿನ್ಯಾಸಕಿಯಾಗಿ, ಮೂಡುಬಿದಿರೆ ಪರಿಸರದ ಶಾಲೆ ಕಾಲೇಜುಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಿದ್ದರು. ಡಾ| ಎಂ. ಮೋಹನ ಆಳ್ವರು ಸ್ಥಾಪಿಸಿದ ‘ರಂಗಸಂಗಮ’ದಲ್ಲಿ ಮಾಸ್ಟರ್ ವಿಟ್ಟಲ್ ಅವರು ನಡೆಸುತ್ತಿದ್ದ ನೃತ್ಯ ತರಗತಿಗಳ ಸಂಚಾಲಕಿಯಾಗಿಯೂ ಸೇವೆ ಸಲ್ಲಿಸಿದ್ದರು. ಮೊದಲಿಗೆ ಕಾಳಿಕಾಂಬಾ ಮಹಿಳಾ ಮಂಡಳಿ, ಬಳಿಕ ಮಹಿಳಾ ಸಮಿತಿಯಲ್ಲಿ ಸಕ್ರಿಯರಾಗಿದ್ದರು.

ಅವರ ನಿಧನಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ , ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರ ಸಹಿತ ಪ್ರಮುಖರು ಸಂತಾಪ ಸೂಚಿಸಿದ್ದಾರೆ.