Recent Posts

Sunday, January 19, 2025
ಸಿನಿಮಾಸುದ್ದಿ

ಕೊನೆಗೂ ನನಸಾಯ್ತು ಚಿರಂಜೀವಿ ಸರ್ಜಾ ಕನಸು : ಸೆ.02ರಂದು ತೆರೆ ಮೇಲೆ ಬರಲಿದೆ ರಾಜ ಮಾರ್ತಾಂಡ – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್ ವುಡ್ ನ ಸ್ಮೈಲ್ ಕಿಂಗ್ ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿದ್ದರೂ ಚಂದನವನದಲ್ಲಿ ಚಿರು ಮೇಲೆ ಅಭಿಮಾನಿಗಳಿಗಿರೋ ಪ್ರೀತಿ ಕಡಿಮೆ ಯಾಗಿಲ್ಲ. ಹೀಗಾಗಿ ಇಂದಿಗೂ ಅಭಿಮಾನಿಗಳು ಚಿರುವನ್ನು ಕಣ್ತುಂಬಿಕೊಳ್ಳಲು ಕಾಯುತ್ತಲೇ ಇದ್ದಾರೆ.

ಈಗ ಚಿರು ಅಭಿಮಾನಿಗಳ ಕಾಯುವಿಕೆಗೆ ಫಲ ಸಿಕ್ಕಿದ್ದು ಇದೇ ಸಪ್ಟೆಂಬರ್ 2 ರಂದು ಚಿರು ಅಭಿನಯದ ಕೊನೆಯ ಚಿತ್ರ ರಾಜ ಮಾರ್ತಾಂಡ ತೆರೆಗೆ ಬರಲು ಸಿದ್ಧವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚಿರಂಜೀವಿ ಸರ್ಜಾ ತುಂಬ ಪ್ರೀತಿಯಿಂದ ಹಾಗೂ ಅಷ್ಟೇ ಇಷ್ಟಪಟ್ಟು ನಟಿಸಿದ್ದ ಈ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೇ 2019 ರಲ್ಲೇ ತೆರೆಗೆ ಬರಬೇಕಿತ್ತು. ಆದರೆ ವಿಧಿಯಾಟದಿಂದ ಚಿರು ಸಿನಿಮಾ ತೆರೆಗೆ ಬರೋ ಮುನ್ನವೇ ನಮ್ಮನ್ನೆಲ್ಲ ಅಗಲಿ ಹೋಗಿದ್ದಾರೆ.

ಈಗ ಚಿರು ನಿಧನದ ಎರಡು ವರ್ಷದ ಬಳಿಕ, ಚಿರು ನಟಿಸಿದ್ದ ಕೊನೆಯ ಸಿನಿಮಾ ರಾಜ ಮಾರ್ತಾಂಡ ತೆರೆಗೆ ಬರಲು ಸಿದ್ಧವಾಗಿದ್ದು, ಈ ವಿಚಾರವನ್ನು ಸ್ವತಃ ಚಿರು ಸಹೋದರ ಹಾಗೂ ನಟ ಧ್ರುವ್ ಸರ್ಜಾ ಖಚಿತಪಡಿಸಿದ್ದು, ಟ್ವಿಟ್ ಮೂಲಕ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ.

ರಾಜ ಮಾರ್ತಾಂಡ ಶೂಟಿಂಗ್ ಬಹುತೇಕ ಮುಕ್ತಾಯಗೊಂಡು ಡಬ್ಬಿಂಗ್ ಹಂತದಲ್ಲಿರುವಾಗ ಚಿರು ಹೃದಯಾಘಾತದಿಂದ ಸ್ಯಾಂಡಲ್ ವುಡ್ ನ್ನು ಅಗಲಿದ್ದರು. ಈ ವೇಳೆ ಚಿತ್ರತಂಡ ಕಂಗಲಾಗಿತ್ತು. ಆದರೆ ಚಿತ್ರ ತಂಡದ ಬೆಂಬಲಕ್ಕೆ ನಿಂತಿದ್ದ ಧ್ರುವ್ ಸರ್ಜಾ ಅಣ್ಣನ ಪಾತ್ರಕ್ಕೆ ಡಬ್ ಮಾಡೋದಾಗಿ ಮಾತುಕೊಟ್ಟಿದ್ದರು. ಧ್ರುವ್ ಸರ್ಜಾ ಮಾತ್ರ ಡಬ್ಬಿಂಗ್ ಮಾಡಿದ್ದಲ್ಲದೇ ನಟ ದರ್ಶನ್ ಕೂಡ ಡಬ್ಬಿಂಗ್ ಮಾಡಿದ್ದಾರೆ.

ಈ ಮಧ್ಯೆ ರಾಜ ಮಾರ್ತಾಂಡ ಸಿನಿಮಾದಲ್ಲಿ ಚಿರು ಪುತ್ರ ರಾಯನ್ ಸರ್ಜಾ ಕೂಡ ಕಾಣಿಸಿಕೊಳ್ಳಲಿದ್ದಾರಂತೆ. ಈ ವಿಚಾರವನ್ನು ಸ್ವತಃ ನಿರ್ಮಾಪಕ, ನಿರ್ದೇಶಕರು ಖಚಿತಪಡಿಸಿದ್ದಾರೆ. ಈ ಸಿನಿಮಾವನ್ನು ಅತ್ಯಂತ ಹೆಚ್ಚು ಪ್ರೀತಿಸಿದ್ದು ಒಂದೊಂದು ಡೈಲಾಗ್ ನ್ನು ಕೂಡ ಮನೆಯಲ್ಲಿ ಆಗಾಗ ಹೇಳಿ ಸಂಭ್ರಮಿಸುತ್ತಿದ್ದರಂತೆ. ಹೀಗಾಗಿ ಈ ಸಿನಿಮಾವನ್ನು ಗೆಲ್ಲಿಸಿ ಎಂದು ಚಿರು ಹಾಗೂ ಮೇಘನಾ ಕುಟುಂಬ ಈ ಹಿಂದೆಯೇ ಮನವಿ ಮಾಡಿದ್ದರು.

ಚಿರು ಹುಟ್ಟುಹಬ್ಬದ ವೇಳೆಯೇ ರಾಜ ಮಾರ್ತಾಂಡ ಸಿನಿಮಾ ತೆರೆಗೆ ಬರಬೇಕಿತ್ತಾದರೂ ಕೊರೋನಾ ಹಾಗೂ ಥಿಯೇಟರ್ ಗಳತ್ತ ಜನರು ಬಾರದೇ ಇರೋ ಕಾರಣಕ್ಕೆ ರಿಲೀಸ್ ಆಗಿರಲಿಲ್ಲ. ಈಗ ಸಪ್ಟೆಂಬರ್ 2 ನೇ ತಾರೀಕು ಸಿನಿಮಾ ರಿಲೀಸ್ ಆಗಲಿದೆ. ಇದು ಚಿರು ಕೊನೆಯ ಸಿನಿಮಾ ಆಗಿರೋದರಿಂದ ಅಭಿಮಾನಿಗಳು ನೋಡಿ ಎಂಜಾಯ್ ಮಾಡಿ ಎಂದು ಚಿತ್ರತಂಡ ಮನವಿ ಮಾಡಿದೆ.