Sunday, January 19, 2025
ಸುದ್ದಿ

ಕಡಬ ಪೇಟೆಯಲ್ಲಿ ಕಳ್ಳತನ; ಇಲೆಕ್ಟ್ರಾನಿಕ್, ಟೈಲ್ಸ್ ಅಂಗಡಿಯಿಂದ ಕಳವು- ಕಹಳೆ ನ್ಯೂಸ್

ಕಡಬ: ಕಡಬದ ಮುಖ್ಯ ಪೇಟೆಯಲ್ಲೇ ಖತರ್ನಾಕ್ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಮುಖ್ಯ ಪೇಟೆಯ ಇಲೆಕ್ಟ್ರಾನಿಕ್, ಟೈಲ್ಸ್ ಅಂಗಡಿಗೆ ನುಗ್ಗಿದ ಕಳ್ಳರು ನಗದು, ಡಿ.ವಿ.ಆರ್ ಕಳವು ಮಾಡಿ ಪರಾರಿಯಾಗಿದ್ದಾರೆ.

ಕಡಬ ಪೇಟೆಯಲ್ಲಿ ಕಾರ್ಯಚರಿಸುತ್ತಿರುವ ಸಂಗೀತಾ ಇಲೆಕ್ಟ್ರಾನಿಕ್ ಹಾಗೂ ಪಕ್ಕದ ಸಾಹೀರಾ ಟೈಲ್ಸ್ ಅಂಗಡಿಗೆ ನಿನ್ನೆ ರಾತ್ರೆ ನುಗ್ಗಿದ ಕಳ್ಳರು ನಗದನ್ನು ಕಳವು ಮಾಡಿದ್ದಾರೆ. ಮಾತ್ರವಲ್ಲದೆ ಎರಡೂ ಅಂಗಡಿಯಲ್ಲಿದ್ದ ಸಿ.ಸಿ ಕ್ಯಾಮರಾ ಹಾಗೂ ಡಿ.ವಿ.ಆರ್ ಹೊತ್ತೊಯ್ದಿದ್ದಾರೆ.ಇನ್ನು ಘಟನಾ ಸ್ಥಳಕ್ಕೆ ಕಡಬ ಪೋಲೀಸರ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು