Sunday, January 19, 2025
ಸುದ್ದಿ

ಮುಕಾಂಬಿಕಾ ಕಲ್ಚರಲ್ ಅಕಾಡಮಿಯಲ್ಲಿ ನೃತ್ಯಾಂತರಂಗ ಕಾರ್ಯಕ್ರಮ; ಕಿರಿಯ ವಿದ್ಯಾರ್ಥಿಗಳಿಂದ ಭರತನಾಟ್ಯ- ಕಹಳೆ ನ್ಯೂಸ್

ಪುತ್ತೂರು : :ಪುತ್ತೂರಿನ ಪುತ್ತೂರಿನ ಶ್ರೀಮೂಕಾಂಬಿಕಾ ಕಲ್ಟರಲ್ ಅಕಾಡೆಮಿ ಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 91ನೇ ಸರಣಿಯಲ್ಲಿ ಸಂಸ್ಥೆಯ ಕಾಂಭೋಜಿ ತಂಡದ ವಿದ್ಯಾರ್ಥಿನಿಯರಾದ ಮಂದಿರಾ ಕಜೆ, ಲಾಸ್ಯ ಸಂತೋಷ್,ವೈಭವಿ ಲಕ್ಷ್ಮಿ ಅವನಿ, ಸೋನು ರಾಜ್, ರಿಶಿತ ಮತ್ತು ಸಿಂಚನಾರವರಿಂದ ಭರತನಾಟ್ಯ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು.

ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಐತಪ್ಪ ನಾಯ್ಕ ಶುಭಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್ , ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ವಿದ್ವಾನ್ ಶ್ಯಾಂ ಭಟ್ ಸುಳ್ಯ ಹಾಗೂ ಕೊಳಲಿನಲ್ಲಿ ವಿದ್ವಾನ್ ಕೃಷ್ಣಗೋಪಾಲ್ ಪುಂಜಾಲಕಟ್ಟೆ ಸಹಕರಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು