Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಜೀವನ ಮೌಲ್ಯವರ್ಧಿತ ಶಿಕ್ಷಣ- ವಿಶೇಷ ಉಪನ್ಯಾಸ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : “ಜೀವನ ಮೌಲ್ಯಗಳು ಬದುಕಿನ ಆಧಾರ ಸ್ತಂಭಗಳಿದ್ದಂತೆ.ಹಾಗೇ ಈ ಮೌಲ್ಯಗಳು ನಮ್ಮ ಸಂಸ್ಕøತಿಯ ಅವಿಭಾಜ್ಯ ಅಂಗ. ಯುವಜನರು ಅವುಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು.ಇಂದಿನ ಯುವಜನಾಂಗದಲ್ಲಿ ಸತ್ಯ, ನ್ಯಾಯ, ಅಹಿಂಸೆ, ಪರಸ್ಪರ ಸಹಕಾರ, ಶೃದ್ಧೆ, ಸಹನೆ, ನಿಷ್ಠೆ, ಪ್ರಾಮಾಣಿಕತೆ, ಅನುಕಂಪ, ಸಹೋದರತ್ವ, ದೇಶಭಕ್ತಿ, ಸರಳ ಜೀವನ, ಗುರು-ಹಿರಿಯರಿಗೆ ಗೌರವ ಮುಂತಾದ ಭಾವನೆಗಳನ್ನು ಬೆಳೆಸುವುದು ಅವಶ್ಯಕವಾಗಿದೆ.ಬದುಕಿಗೆ ಪೂರಕವಾದ ಜೀವನದ ಪರೀಕ್ಷೆಯನ್ನು ಎದುರಿಸಲು ಸದೃಢರನ್ನಾಗಿ ಮಾಡುವುದೇ ಈ ಮೌಲ್ಯಯುತ ಶಿಕ್ಷಣದ ಮೂಲ ಉದ್ದೇಶವಾಗಿರಬೇಕು. ಮೌಲ್ಯಗಳಿಲ್ಲದ ಜೀವನ ವ್ಯರ್ಥ.ಅದನ್ನು ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕಗೊಳ್ಳುವುದು.”ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಿವಾರ ಸಂಘಟನೆಯಲ್ಲಿ ಒಂದಾದ ಹಿಂದು ಜಾಗರಣ ವೇದಿಕೆ ಮಾತೃಸುರಕ್ಷಾ ದಕ್ಷಿಣ ಪ್ರಾಂತದ ಸಂಯೋಜಕರಾದ ಗಣರಾಜ ಭಟ್ ರವರು ಹೇಳಿದರು. ಮಾತೃಸಂಸ್ಕøತಿಯ ನಿಷ್ಕಲ್ಮಶ ಪ್ರೀತಿಯ ಬಗ್ಗೆ ತಿಳಿಸಿದರು.

ಹೆಣ್ಣು ಮಕ್ಕಳಿಗೆ ರಕ್ಷಣೆ ಮತ್ತು ಅವಕಾಶಗಳನ್ನು ನೀಡುವುದರ ಜೊತೆಗೆ ಸಮಾಜದಲ್ಲಿನ ಸವಾಲನ್ನು ಎದುರಿಸುವ ಬಗೆಗಿನ ಮಾಹಿತಿಯನ್ನು ನೀಡಿದರು. ಎಲ್ಲಾ ರೀತಿಯ ತೊಡಕುಗಳನ್ನು ನಿವಾರಿಸಿ ಹೆಣ್ಣು ಮಕ್ಕಳಿಗೆ ಸುಭದ್ರತೆಯ ವಾತಾವರಣವನ್ನು ಕಲ್ಪಿಸುವ ಬಗೆಯನ್ನು ವಿವರಿಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ಶಶಿಕಲಾ ಸ್ವಾಗತಿಸಿ, ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು