Recent Posts

Sunday, January 19, 2025
ಉಡುಪಿಸುದ್ದಿ

ಕಟಪಾಡಿ: ನೇಜಿ ಕೀಳುತ್ತಿದ್ದ ಗದ್ದೆಯಲ್ಲಿ ಕೃಷಿಕರ ಕೈಸೇರಿತು ಸಾವಿರಾರು ರೂ. ಬೆಲೆ ಬಾಳುವ ಮೀನುಗಳು – ಕಹಳೆ ನ್ಯೂಸ್

ಕಟಪಾಡಿ: ನೇಜಿ ಕೀಳುತ್ತಿದ್ದ ಗದ್ದೆಯಲ್ಲಿ ಸಾವಿರಾರು ರೂ. ಬೆಲೆ ಬಾಳುವ ಮುಗುಡು ಮೀನುಗಳು ಕೋಟೆ ಅಂಬಾಡಿಯ ಕೃಷಿಕರ ಮನೆಯಲ್ಲಿ ಪತ್ತೆಯಾಗಿದೆ.

ಕೋಟೆ ಅಂಬಾಡಿಯ ಪ್ರಗತಿಪರ ಕೃಷಿಕ ಸುಂದರ ಪೂಜಾರಿ ಅವರು ನೇಜಿ (ಭತ್ತದ ಸಸಿ) ಕೀಳುತ್ತಿದ್ದ ಸಂದರ್ಭ ಗದ್ದೆಯಲ್ಲಿ ಬೃಹತ್ ಗಾತ್ರದ 2 ಮುಗುಡು ಮೀನುಗಳು ಲಭಿಸಿದ್ದು, ಸುಮಾರು 4 ವರ್ಷಕ್ಕೂ ಮಿಕ್ಕಿ ಪ್ರಾಯದ ಬಲಿತಿರುವ ಮುಗುಡುಗಳು ತಲಾ 10 ಕೆಜಿ ಇದ್ದು, ಮಾರುಕಟ್ಟೆಯಲ್ಲಿ ಸಾವಿರಾರು ರೂ. ಬೆಲೆ ಬಾಳುತ್ತದೆ. ಇದು ಮೀನು ಪ್ರಿಯ ಕುಟುಂಬದಲ್ಲಿ ಸಂತಸ ತಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು