Breaking News : ಮಂಗಳೂರಿನಲ್ಲಿ ಭಾರೀ ವೇಶ್ಯಾವಾಟಿಕೆ ಜಾಲದ ಮೇಲೆ ಪೋಲೀಸ್ ದಾಳಿ ; ದಂದೆಗಾಗಿ ಬಲಾತ್ಕಾರವಾಗಿ ಕೂಡಿಹಾಕಲಾಗಿದ್ದ ಹತ್ತಾರೂ ಯುವತಿಯರು ಪತ್ತೆ – ಕಹಳೆ ನ್ಯೂಸ್
ಮಂಗಳೂರು: ವೇಶ್ಯಾವಾಟಿಕೆಗಾಗಿ ಮಂಗಳೂರಿನ ಲಾಡ್ಜ್ ವೊಂದರಲ್ಲಿ ಕೂಡಿಹಾಕಲಾದ ಆರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ.
ಬಾಂಗ್ಲಾದೇಶ ಮೂಲದ ಆರು ಯುವತಿಯರನ್ನು ರಕ್ಷಿಸಲಾಗಿದ್ದು ಪೊಲೀಸರ ದಾಳಿ ಸಂದರ್ಭದಲ್ಲಿ ನಾಲ್ವರು ಯುವತಿಯರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪಂಪ್‌ವೆಲ್‌ನಲ್ಲಿರುವ ಅನ್ನಪೂರ್ಣ ಹೊಟೇಲ್ ಹಾಗೂ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿದ್ದಾರೆ. ಅನ್ನಪೂರ್ಣ ಹೊಟೇಲ್ ಹಾಗೂ ಲಾಡ್ಜ್ ಇರುವ ಕಟ್ಟಡದ ಮೂರನೇ ಮಹಡಿಯಲ್ಲಿನ ರಹಸ್ಯ ಕೊಠಡಿಯಲ್ಲಿ ಯುವತಿಯರನ್ನು ಕೂಡಿ ಹಾಕಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಈ ವೇಳೆ 6 ಯುವತಿಯರು ಪತ್ತೆಯಾಗಿದ್ದು, ನಾಲ್ಕು ಯುವತಿಯರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೈಲ್ಡ್ ಲೈನ್ ಸಂಸ್ಥೆ ನೀಡಿದ ಮಾಹಿತಿ ಮೇರೆಗೆ ಇಂದು ಮುಂಜಾನೆ ವೇಳೆ ಈ ದಾಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನಿವಾಸಿ ಪವನ್(26) ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಮುಖ ಆರೋಪಿ ಶಿವರಾಮ ಪೂಜಾರಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಇದೀಗ ಈ ವೇಶ್ಯಾವಾಟಿಕೆ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.