Monday, January 20, 2025
ದಕ್ಷಿಣ ಕನ್ನಡಸುದ್ದಿ

ವಿವಿ ಕಾಲೇಜು: ಮೃದು ಕೌಶಲ ತರಬೇತಿ ಕಾರ್ಯಕ್ರಮ- ಕಹಳೆ ನ್ಯೂಸ್

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಅಂತಿಮ ವರ್ಷದ ಎಂ.ಕಾಂ ವಿದ್ಯಾರ್ಥಿಗಳಿಗಾಗಿ ʼರೀಕಾನ್ʼ ಎಂಬ ಕಾರ್ಯಕ್ರಮವನ್ನು ರವೀಂದ್ರ ಕಲಾಭವನದಲ್ಲಿ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ರೊಟೇರಿಯನ್ ಹೀರಾಚಂದ್ ಕರ್ಕೇರಾ ಮತ್ತು ಲೋಹಿತ್ ಶೆಟ್ಟಿ ವಿದ್ಯಾರ್ಥಿಗಳಿಗೆ ಐಸ್ ಬ್ರೇಕಿಂಗ್ ಸೆಷನ್, ಆಪ್ಟಿಟ್ಯೂಡ್ ಮತ್ತು ರೀಸನಿಂಗ್, ಗುಂಪು ಚರ್ಚೆ, ಅಣಕು ಸಂದರ್ಶನಗಳೆಂಬ ನಾಲ್ಕು ಅವಧಿಗಳಲ್ಲಿ ವಿವಿಧ ಮೃದು ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಸಿಕೊಟ್ಟರು. ವಿದ್ಯಾರ್ಥಿಗಳೂ ಸಕ್ರಿಯವಾಗಿ ಪಾಲ್ಗೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಯತೀಶ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ಸ್ವಾತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಾ ಧನ್ಯವಾದ ಸಮರ್ಪಿಸಿದರು. ವಿಭಾಗದ ಉಪನ್ಯಾಸಕರಾದ ಹರ್ಷಿತಾ, ಲಹರಿ, ಶೀತಲ್, ರಮ್ಯಾ ಮತ್ತು ಸಮೀಕ್ಷಾ ಉಪಸ್ಥಿತರಿದ್ದರು.