Tuesday, January 21, 2025
ಸುದ್ದಿ

ಶಿರಾಡಿ ಘಾಟಿ ರಸ್ತೆ ದುರಸ್ತಿ ಕಾಮಗಾರಿಗೆ 4 ತಿಂಗಳು ಬಂದ್ ಬೇಡಿಕೆ – ಕಹಳೆ ನ್ಯೂಸ್

ಮಂಗಳೂರು: ಬೆಂಗಳೂರು ಸಂಪರ್ಕಿಸುವ ರಾ. ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿಗೆ 4 ತಿಂಗಳು ಸಂಚಾರ ಬಂದ್ ಮಾಡುವಂತೆ ಕಾಮಗಾರಿ ಟೆಂಡರ್ ವಹಿಸಿರುವ ಸಂಸ್ಥೆಯು ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಬೇಡಿಕೆ ಮಂಡಿಸಿದೆ.

ಮಾರನಹಳ್ಳಿ- ಸಕಲೇಶಪುರ ರಸ್ತೆ ತಿರುವುಗಳನ್ನು ಹೊಂದಿದ್ದು, ದುರಸ್ತಿಗೆ ರಸ್ತೆ ಬಂದ್ ಮಾಡುವುದು ತೀರಾ ಅಗತ್ಯ ಎಂದು ಗುತ್ತಿಗೆದಾರರರು ಪ್ರತಿಪಾದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯಕ್ಕೆ ರಸ್ತೆಯನ್ನು ಮುಚ್ಚುವ ಚಿಂತನೆ ಇಲ್ಲ. ಅಧಿಕಾರಿಗಳು, ತಂತ್ರಜ್ಞರ ಜತೆ ಜಂಟಿ ಸರ್ವೇ ನಡೆಸಿ ಯಾವ ರೀತಿಯಲ್ಲಿ ರಸ್ತೆಯನ್ನು ದುರಸ್ತಿ ಮಾಡಬಹುದು ಎಂಬ ಬಗ್ಗೆ ಶೀಘ್ರ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು