ಚಾರ್ಮಾಡಿ ಘಾಟ್ ಜಲಪಾತದಲ್ಲಿ ಪ್ರವಾಸಿಗರ ಮೋಜುಮಸ್ತಿ: ರಸ್ತೆ ಮಧ್ಯದಲ್ಲೇ ನಿಂತು ಸೆಲ್ಫಿ : ರಸ್ತೆ ಸಂಚಾರಕ್ಕೆ ಅಡಚಣೆ – ಕಹಳೆ ನ್ಯೂಸ್
ಚಾರ್ಮಾಡಿ : ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸೇರುವ ಚಾರ್ಮಾಡಿ ಘಾಟ್ ನ ಜಲಪಾತದಲ್ಲಿ ಪ್ರವಾಸಿಗರು ಮೋಜು ಮಸ್ತಿಯಿಂದಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ರಸ್ತೆ ಮಧ್ಯದಲ್ಲೇ ನಿಂತು ಸೆಲ್ಫಿ ಜೊತೆ ಟಿಕ್ ಟಾಕ್ ಮಾಡುವುದರಿಂದ ರಸ್ತೆಯಲ್ಲಿ ಸುಗಮವಾಗಿ ಸಂಚಾರ ಮಾಡುತ್ತಿದ್ದ ವಾಹನಗಳಿಗೂ ಇವರಿಂದ ಅಡಚಣೆಯಾಗುತ್ತಿದೆ.
ಜೂ.26 ರಂದು ವೀಕೆಂಡ್ ಇದ್ದ ಕಾರಣ ಪ್ರವಾಸಿಗರು ಬಂಡೆ ಕಲ್ಲುಗಳ ಮೇಲೆ ನಿಂತು ಸೆಲ್ಫಿ ತೆಗೆಯುವುದೇ ಅನಾಹುತಕ್ಕೆ ಕಾರಣವಾಗಬಹುದು. ಮಲೆನಾಡಿನಲ್ಲಿ ಧಾರಾಕಾರ ಮಳೆಯಿಂದಾಗಿ ಬಂಡೆಗಳ ಮೇಲೆ ಹತ್ತಿದರೆ ಜಾರುವ ಸನ್ನಿವೇಶಗಳು ಹೆಚ್ಚಾಗಿರುವುದರಿಂದ ಅಪಾಯಗಳು ಎದುರಾಗಬಹುದು.
ಇನ್ನು ಹೆಚ್ಚಿನ ದುರಂತ ಆಗುವ ಮುನ್ನ ಪೆÇಲೀಸರೇ ಕಡಿವಾಣ ಹಾಕಬೇಕಾಗಿದೆ.