Thursday, January 23, 2025
ದಕ್ಷಿಣ ಕನ್ನಡಸುದ್ದಿ

ಮಂಗಳೂರು : ಮುಳುಗಿರುವ ಸಿರಿಯಾದ ಹಡಗಿನಲ್ಲಿರುವ ತೈಲ ಸೋರಿಕೆಯಾಗುವ ಆತಂಕ : ಜಿಲ್ಲಾಡಳಿತ ಹೈ ಅಲರ್ಟ್ – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಚ್ಚಿಲದ ಬಟ್ಟಪ್ಪಾಡಿ ಬಳಿ ಸಮುದ್ರದಲ್ಲಿ ಮುಳುಗಿರುವ ಸಿರಿಯಾದ ಹಡಗಿನಲ್ಲಿರುವ 220 ಮೆಟ್ರಿಕ್ ಟನ್ ತೈಲ ಸೋರಿಕೆಯಾಗುವ ಆತಂಕದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಆಗಿದ್ದು, ಕೋಸ್ಟ್‍ಗಾರ್ಡ್ ನೌಕೆ ಹಾಗೂ ಹೆಲಿಕಾಪ್ಟರ್‍ಗಳು ಕಣ್ಗಾವಲು ನಡೆಸುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆ ಸಂಬಂಧಿಸಿದಂತೆ ಕೇಂದ್ರದ ತನಿಖಾ ದಳದಿಂದ ತನಿಖೆ ಪ್ರಾರಂಭಿಸಿದ್ದು, ಇಂಡಿಯನ್ ಕೋಸ್ಟ್‍ಗಾರ್ಡ್‍ನ ಮಿನಿ ಜೆಟ್ ವಿಮಾನ ಮಾನಿಟರಿಂಗ್ ಕಾರ್ಯ ಆರಂಭಿಸಿದೆ

ಜಾಹೀರಾತು
ಜಾಹೀರಾತು
ಜಾಹೀರಾತು

ಮಲೇಶ್ಯಾದಿಂದ ಲೆಬನಾನ್‍ಗೆ ಉಕ್ಕಿನ ಕಾಯಿಲ್‍ಗಳನ್ನು ಸಾಗಿಸುತ್ತಿದ್ದ ನೌಕೆ ಸಮುದ್ರ ಮಧ್ಯದಿಂದ ತೀರದ ಬಳಿ ಸಾಗುತ್ತಾ ಉಳ್ಳಾಲದ ಬಟ್ಟಪಾಡಿಗೆ ಬಂದಿರುವುದು ಯಾಕೆ ಎಂಬ ಪ್ರಶ್ನೆ ಇನ್ನೂ ಉಳಿದುಕೊಂಡಿದೆ.

ತಾಂತ್ರಿಕ ದೋಷ ಮತ್ತು ರಂಧ್ರ ಕಂಡು ಬಂದ ಕೂಡಲೇ ದುರಸ್ತಿಗಾಗಿ ನೌಕೆಯನ್ನು ಕ್ಯಾಪ್ಟನ್ ನವಮಂಗಳೂರು ಬಂದರಿನ ಆ್ಯಂಕರೇಜ್ ಮತ್ತು ಮಂಗಳೂರು ಹಳೇಬಂದರಿಗೆ ತರಲು ಪ್ರಯತ್ನಿಸಿದ್ದರೂ ಅನುಮತಿ ಸಿಕ್ಕಿರಲಿಲ್ಲ. ಆ ಕಾರಣ ಉಳ್ಳಾಲದತ್ತ ಹಡಗನ್ನು ಕೊಂಡೊಯ್ಯಲಾಗಿದೆ ಎನ್ನಲಾಗುತ್ತಿದ್ದು, ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ಇಂಡಿಯನ್ ಕೋಸ್ಟ್‍ಗಾರ್ಡ್ ಜತೆ ಕೇಂದ್ರದ ತನಿಖಾ ದಳದಿಂದ ತನಿಖೆಯಾಗಲಿದೆ.