Recent Posts

Sunday, January 19, 2025
ಸುದ್ದಿ

Breaking News : ಅನಾಥ ಮುಸ್ಲಿಂ ಯುವತಿಯ ಕೈ ಹಿಡಿದು ಬಾಳು ನೀಡಿದ ಬ್ರಾಹ್ಮಣ ಯುವಕ – ಕಹಳೆ ನ್ಯೂಸ್

ಕಲಬುರಗಿ, ಜೂ22:  ಮಹಿಳಾ ನಿಲಯದಲ್ಲಿ ಬದುಕು ಸಾಗಿಸುತ್ತಿದ್ದ ಅನಾಥ ಶಬಾನಾಳಿಗೆ ಬ್ರಾಹ್ಮಣ ಸಮುದಾಯದ ಯುವಕನೋರ್ವ ಬಾಳು ನೀಡಿರುವ ಘಟನೆಯೊಂದು ನಡೆದಿದೆ.

ಕಲಬುರಗಿ ವಿಕ್ರಮ್​ ಎಂಬುವವರು ಇತ್ತೀಚೆಗೆ ಅನಾಥ ಹುಡುಗಿಯನ್ನು ಮದುವೆಯಾಗಬೇಕು ಎಂದು ​ ತಮ್ಮ ಕುಟುಂಬಸ್ಥರೊಂದಿಗೆ ಮಹಿಳಾ ನಿಲಯಕ್ಕೆ ಬಂದಿದ್ದರು. ಈ ವೇಳೆ ವಿಕ್ರಮ್ ಮಹಿಳಾ ನಿಲಯದಲ್ಲಿದ್ದ ಮುಸ್ಲಿಂ ಯುವತಿ ಶಬಾನಾ ಅವರನ್ನು ಇಷ್ಟಪಟ್ಟಿದ್ದರು. ಈ ವಿಷಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಹಿರಿಯ ಅಧಿಕಾರಿಗಳಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ ವಿಕ್ರಮ್​ ಮತ್ತು ಶಬಾನಾ ಅವರನ್ನು ಮದುವೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಬಾನಾ 7 ವರ್ಷದವಳಿದ್ದಾಗ ಯಾದಗಿರಿಯ ಬಾಲಮಂದಿರಕ್ಕೆ ದಾಖಲಾಗಿದ್ದಳು. 18 ವರ್ಷವಾದ ಬಳಿಕ ಶಬಾನಾ ಕಲಬುರಗಿಯ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಾಗಿದ್ದಳು. ಶಬಾನಾ ಪ್ರಥಮ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದು, ಅನಾಥೆಯಾಗಿ ಜೀವನ ನಡೆಸುತ್ತಿದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಅನಾಥೆಯಾಗಿದ್ದ ಶಬಾನಾಳಿಗೆ ವಿಕ್ರಮ್ ಬಾಳು ನೀಡುವ ಮೂಲಕ ಅಪರೂಪದ ಮದುವೆಗೆ ಸಾಕ್ಷಿಯಾಗಿದ್ದಾರೆ.