ನೇರಳಕಟ್ಟೆಯಲ್ಲಿ ಹಾಡುಹಾಗಲೇ ಯುವಕನಿಂದ ಚೂರಿ ಇರಿದು ಮಹಿಳೆಯ ಕೊಲೆ;ಪುತ್ತೂರಿನ ಕೊಂಬೆಟ್ಟುವಿನಲ್ಲಿ ಹೋಟೆಲ್ ಹೊಂದಿದ ಮಹಿಳೆ- ಕಹಳೆ ನ್ಯೂಸ್
ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ನೇರಳಕಟ್ಟೆ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಗೆ ಆಟೋದಲ್ಲಿ ಬಂದ ಯುವಕನೊಬ್ಬಚೂರಿ ಇರಿದು ಹತ್ಯೆ ಮಾಡಿದ ಘಟನೆ ಜೂ.27 ರಂದು ಹಾಡುಹಗಲೇ ನಡೆದಿದೆ.
ಪುತ್ತೂರಿನ ಬಂಟರ ಭವನದ ಬಳಿ ಹೊಟೇಲ್ ಹೊಂದಿರುವ ಬಂಟ್ವಾಳ ತಾಲೂಕಿನ ನೆಟ್ಲಮುಡೂರು ಗ್ರಾಮದ ದೇವಿನಗರದ ಕ್ವಾಟ್ರಾಸ್ ನಿವಾಸಿ ಶಕುಂತಳಾ (36) ಮೃತ ಮಹಿಳೆ. ಚೂರಿ ಇರಿತದಿಂದ ಮ ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೇ ವಿಪರೀತ ರಕ್ತಸ್ರಾವಕ್ಕೆ ತುತ್ತಾಗಿದ ಆಕೆ ಬದುಕುಳಿಯಲಿಲ್ಲ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಮಹಿಳೆ ಅಕ್ಕಿವಾದಲ್ಲಿ ಚಲಿಸುತ್ತಿದ್ದಾಗ ಆಟೋದಲ್ಲಿ ಬಂದ ಯುವಕ ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ಬಳಿ ಆಕೆಯನ್ನು ಅಡ್ಡಗಟ್ಟಿ ತಡೆದಿದ್ದಾನೆ. ಬಳಿಕ ಅವರಿಬ್ಬರ ಮಧ್ಯೆ ಕೆಲ ಸಮಯದವರೆಗೆ ವಾಗ್ವಾದ ನಡೆದಿದೆ. ಬಳಿಕ ಯುವಕ ಮಹಿಳೆಗೆ ಚೂರಿಯಿಂದ ಇರಿದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಮಹಿಳೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಯುವಕ ಸ್ಥಳದಿಂದ ಪರಾರಿಯಾಗಿದ್ದು ಪೆರಾಜೆ ಕಡೆ ಓಡಿ ಹೋಗಿದ್ದಾನೆ ಎನ್ನಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ
ಎಂದು ತಿಳಿದು ಬಂದಿದೆ. ಇಡೀ ಘಟನೆ ನಿಗೂಢತೆಯಿಂದ ಕೂಡಿದ್ದು ಕೃತ್ಯಕ್ಕೆ ಕಾರಣ ಎನೂ ಅನ್ನುವುದು ತಿಳಿದು ಬಂದಿಲ್ಲ. ಆದರೇ ಜನನಿಬಿಡಪ್ರದೇಶದಲ್ಲಿ ಹಾಡುಹಗಲೇ ನಡೆದ ಈ ಘಟನೆ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿದೆ. ಮಹಿಳೆ ಅಂತರ್ಜಾತಿಯ ವಿವಾಹವಾಗಿದ್ದು ಮೂವರು ಮಕ್ಕಳನ್ನು ಹೊಂದಿದ್ದಾರೆ. ಅವರು ಪತಿ ಸಂಜೀವ ಸೆಂಟ್ರಿಗ್ ಕೆಲಸ ಮಾಡಿಕೊಂಡಿದ್ದಾರೆ.
ಮಹಿಳೆ ಹಾಗೂ ಆಕೆಯ ಸಹೋದರಿ ಸೇರಿ ಪುತ್ತೂರಿನ ಬಂಟರ ಭವನದ ಸಮೀಪ ಕ್ಯಾಂಟಿನ್ ಮಾದರಿಯ ಹೊಟೇಲ್ ನಡೆಸುತ್ತಿದ್ದರು.