Tuesday, April 22, 2025
ದಕ್ಷಿಣ ಕನ್ನಡಸುದ್ದಿ

ಸಂಸದ ನಳಿನ್ ಕುಮಾರ್ ಕಟೀಲ್ ಮನವಿಗೆ ಸ್ಪಂದಿಸಿದ ರೈಲ್ವೆ ಜನರಲ್ ಮ್ಯಾನೇಜರ್ – ಕಹಳೆ ನ್ಯೂಸ್

ಮಂಗಳೂರು: ಬೆಂಗಳೂರು-ಕಣ್ಣೂರು-ಬೆಂಗಳೂರು ನಡುವೆ ಸಂಚರಿಸುವ ಟ್ರೈನ್ ನಂ. 16511/16512 ಗೆ ಎರಡು ಸ್ಲೀಪರ್ ಬೋಗಿಗಳನ್ನು ಹಾಗೂ ಒಂದು ತ್ರಿ ಟಯರ್ ಎ.ಸಿ. ಕೋಚ್ ಬೋಗಿಗಳನ್ನು ಅಳವಡಿಸುವಂತೆ ಸಂಸದರು ಹಾಗೂ ದಕ್ಷಿಣ ಕನ್ನಡ ಲೋಕ ಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲು ಇವರು ಮನವಿ ಸಲ್ಲಿಸಿದ್ದರು.

ಮಾನ್ಯ ಸಂಸದರ ಮನವಿಗೆ ಸ್ಪಂದಿಸಿದ ರೈಲ್ವೆ ಜನರಲ್ ಮ್ಯಾನೇಜರ್ ಜೂ. 30 ರಿಂದಅನ್ವಯವಾಗುವಂತೆ ಹೆಚ್ಚುವರಿ ಒಂದು ಸ್ಲೀಪರ್ ಬೋಗಿಯನ್ನು ಬೆಂಗಳೂರು-ಕಣ್ಣೂರು (16511) ರೈಲಿಗೆ ಹಾಗೂ ಕಣ್ಣೂರು-ಬೆಂಗಳೂರು(16512) ರೈಲಿಗೆ ಅಳವಡಿಸಲಾಗುತ್ತಿದೆ. ಈ ಬಗ್ಗೆ ಪತ್ರ ಮುಖೇನ ಮಾನ್ಯ ಸಂಸದರಿಗೆ ಸೌತ್ ವೆಸ್ಟರ್ನ್ ರೈಲ್ವೆ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ