Recent Posts

Sunday, January 19, 2025
ಸಿನಿಮಾ

ಸೂರಜ್ ಶೆಟ್ಟಿ ನಿರ್ದೇಶನದ ” ಅಮ್ಮರ್ ಪೊಲೀಸ್ ” ಚಿತ್ರ ತೆರೆಗೆ ; ಚಿತ್ರ ನೋಡಿದ ಪ್ರೇಕ್ಷಕರು ಫುಲ್ ಖುಷ್ – ಕಹಳೆ ನ್ಯೂಸ್

ಸಿನಿ ಕಹಳೆ :  ಲಕುಮಿ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ ಸೂರಜ್ ಶೆಟ್ಟಿ ನಿರ್ದೇಶನದ, ರಾಜೇಶ್.ಬಿ.ಶೆಟ್ಟಿ ನಿರ್ಮಾಣದ ಅಮ್ಮೆರ್ ಪೊಲೀಸ್ ತುಳು ಸಿನಿಮಾ ಇಂದು ಕರಾವಳಿ ಜಿಲ್ಲೆಯಾದ್ಯಂತ 14 ಟಾಕೀಸ್ ಗಳಲ್ಲಿ ತೆರೆ ಕಂಡಿತು.

ಅಮ್ಮೆರ್ ಪೊಲೀಸ್ ಸಿನಿಮಾವು ಮಂಗಳೂರಿನ ಜ್ಯೋತಿ , ಪಿವಿಆರ್, ಸಿನಿಪೊಲೀಸ್, ಬಿಗ್ ಸಿನಿಮಾಸ್, ಸುರತ್ಕಲ್ ನಲ್ಲಿ ನಟರಾಜ್, ಮೂಡಬಿದಿರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕ ,ಪ್ಲಾನೆಟ್, ಪುತ್ತೂರಿನಲ್ಲಿ ಅರುಣಾ, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರಗಳಲ್ಲಿ ತೆರೆ ಕಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು 150 ಮಂದಿ ಈ ಚಿತ್ರದಲ್ಲಿ ನಟಿಸಿರುವುದು ಈ ಚಿತ್ರದ ವಿಶೇಷತೆಯಾಗಿದೆ.ಸಂಪೂರ್ಣ ಹಾಸ್ಯ ಮನರಂಜನೆಯನ್ನು ಒಳಗೊಂಡ ಈ ಸಿನಿಮಾದಲ್ಲಿ ಸಮಾಜಕ್ಕೆ ಸಂದೇಶವೂ ಇದೆ.

ಸಿನಿಮಾಕ್ಕೆ ಇರಾ, ಮುಡಿಪು, ಪ್ರದೇಶದಲ್ಲಿ ಒಂದೇ ಹಂತದಲ್ಲಿ 24 ದಿನಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾಕ್ಕೆ ಕತೆ, ಚಿತ್ರಕತೆ, ಸಾಹಿತ್ಯ, ಸಂಭಾಷಣೆ, ಸಾಹಸ, ನೃತ್ಯ, ಸಂಯೋಜನೆಯ ಜೊತೆಗೆ ಸಿನಿಮಾವನ್ನು ನಿರ್ದೇಶನ ಮಾಡಿದವರು ಕೆ.ಸೂರಜ್ ಶೆಟ್ಟಿ.ಎಕ್ಕಸಕ, ಪಿಲಿಬೈಲ್ ಯಮುನಕ್ಕ ದಂತಹ ಸೂಪರ್ರ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಕೆ.ಸೂರಜ್ ಶೆಟ್ಟಿ, ಲಕುಮಿ ಬ್ಯಾನರ್ ನಲ್ಲಿ ನಿರ್ದೇಶಿಸಿದ ಮೂರನೆ ಸಿನಿಮಾ ಇದಾಗಿದೆ.

ಸಿನಿಮಾಕ್ಕೆ ಸಚಿನ್.ಎಸ್.ಶೆಟ್ಟಿ ಅವರ ಛಾಯಾಗ್ರಹಣವಿದೆ. ಸಂದೀಪ್ ಆರ್ ಬಳ್ಳಾಲ್ ಸಂಗೀತ ನೀಡಿದ್ದಾರೆ. ಮನು ಶೇರಿಗಾರ್ ಅವರು ಸಂಕಲನ ಮಾಡಿದ್ದಾರೆ. ರೀರೆಕಾರ್ಡಿಂಗ್ ಪ್ರಸಾದ್ ಶೆಟ್ಟಿ, ತಾರಾಗಣದಲ್ಲಿ ರೂಪೇಶ್ ಶೆಟ್ಟಿ, ಪೂಜಾ ಶೆಟ್ಟಿ, ನವೀನ್.ಡಿ.ಪಡೀಲ್. ಅರವಿಂದ ಬೋಳಾರ್, ವಿಸ್ಮಯ ವಿನಾಯಕ್, ಮೈಮ್ ರಾಮ್ದಾಸ್, ಪ್ರಜ್ವಲ್ ಪ್ರಕಾಶ್, ನಿತೇಶ್ ಶೆಟ್ಟಿ ಎಕ್ಕಾರ್, ಸತೀಶ್ ಬಂದಲೆ, ದೀಪಕ್ ರೈ ಪಣಾಜೆ, ಪ್ರಸನ್ನ ಶೆಟ್ಟಿ ಬೈಲೂರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಸೂರಜ್ ಶೆಟ್ಟಿ, ರವಿರಾಮ ಕುಂಜ, ಅನಿಲ್, ಆಶೋಕ್ ಬೇಕೂರ್, ರಾಜೇಶ್ ಬಂದ್ಯೋಡ್, ಸರಿತಾ ಶೆಟ್ಟಿ, ಸೀಮಾ ಮೊದಲಾದವರು ಇದ್ದಾರೆ.

ಇಂದು ಬೆಳಿಗ್ಗೆ 9:15 ಕ್ಕೆ ಜ್ಯೋತಿ ಚಿತ್ರ ಮಂದಿರದಲ್ಲಿ ಅಮ್ಮೆರ್ ಪೊಲೀಸ್ ಸಿನಿಮಾದ ಬಿಡುಗಡೆ ಸಮಾರಂಭ ಜರಗಿತು. ಸಮಾರಂಭದಲ್ಲಿ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಚಿತ್ರದ ಮೊದಲದಿನವೇ ಹೌಸ್ ಫುಲ್ ಶೋ ಖಂಡಿದ್ದು ನೂರುದಿನದ ಪ್ರತೀಕ್ಷೆಯಲ್ಲಿ ಚಿತ್ರ ತಂಡ ವಿದೆ.