Monday, January 20, 2025
ಕ್ರೈಮ್ರಾಜ್ಯಸುದ್ದಿ

” ನಿಮ್ಮದು ………. ಸೂಪರ್, ……….. ಮಾಡೋಣ ಬನ್ನಿ….! ” – ವಿದ್ಯಾರ್ಥಿ ತಾಯಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಶಿಕ್ಷಕ ಅಮಾನತು – ಕಹಳೆ ನ್ಯೂಸ್

ತುಮಕೂರು: ವಿದ್ಯಾರ್ಥಿ ತಾಯಿಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ ಶಿಕ್ಷಕನನ್ನು ಅಮಾನತು ಮಾಡಿರುವ ಘಟನೆ ಮಧುಗಿರಿ ತಾಲ್ಲೂಕಿನ ದೊಡ್ಡಹಟ್ಟಿಯಲ್ಲಿ ನಡೆದಿದೆ.

ದೊಡ್ಡಹಟ್ಟಿ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್‌ ಅಮಾನತುಗೊಂಡ ಶಿಕ್ಷಕ. ಈತ ವಿದ್ಯಾರ್ಥಿಗಳ ಪೋಷಕರ ಮೊಬೈಲ್‌ ಸಂಖ್ಯೆ ಪಡೆದು ಅಶ್ಲೀಲವಾಗಿ ಮೆಸೇಜ್‌ ಕಳುಹಿಸುತ್ತಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳ ತಾಯಂದಿರ ನಂಬರ್‌ಗಳನ್ನು ಶಿಕ್ಷಕ ಪಡೆಯುತ್ತಿದ್ದ. ವಿದ್ಯಾರ್ಥಿಗಳ ತಾಯಂದಿರ ವಾಟ್ಸಪ್‌ಗೆ ಅಶ್ಲೀಲವಾಗಿ ಮೆಸೇಜ್ ಮಾಡಿ‌ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ಗ್ರಾಮದ ಮಹಿಳೆಯರು ಶಿಕ್ಷಕ ಸುರೇಶ್ ವಿರುದ್ದ ಡಿಡಿಪಿಐಗೆ ದೂರು ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮದ ಯುವಕರೊಂದಿಗೆ ಶಿಕ್ಷಕ ಸುರೇಶ್ ಪ್ರತಿನಿತ್ಯ ಪಾರ್ಟಿ ಮಾಡುತ್ತಿದ್ದ ಎಂದು ಸಹ ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಿದ ಬಳಿಕ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಮಧುಗಿರಿ ಡಿಡಿಪಿಐ ರೇವಣ್ಣ ಸಿದ್ದಪ್ಪ ಈ ಆದೇಶ ಹೊರಡಿಸಿದ್ದಾರೆ.