Recent Posts

Sunday, January 19, 2025
ಕಾಸರಗೋಡುಕ್ರೈಮ್ಸುದ್ದಿ

ಹಲ್ಲುಜ್ಜದೇ ಕಿಸ್ ಮಾಡೋದನ್ನ ತಡೆದಿದ್ದಕ್ಕೆ ಹೆಂಡತಿಯನ್ನೇ ಕೊಂದ ಪತಿರಾಯ – ಕಹಳೆ ನ್ಯೂಸ್

ತಿರುವನಂತಪುರಂ: ಪ್ರತಿದಿನವೂ ಒಂದಿಲ್ಲೊಂದು ಕಾರಣಗಳಿಗೆ ಅನೇಕ ಕಡೆ ಹತ್ಯೆ ನಡೆಯುವುದನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಹೆಂಡತಿಯನ್ನೇ ಹೊಡೆದು ಕೊಂದಿರುವ ಘಟನೆ ನಡೆದಿದೆ.

ಹಲ್ಲುಜ್ಜದೇ ತಮ್ಮ ಪುಟ್ಟ ಮಗುವಿಗೆ ಮುತ್ತಿಡಲು ಬಂದ ಪತಿಯನ್ನು ತಡೆದಿದ್ದಕ್ಕೆ ಹೆಂಡತಿಯನ್ನೇ ಕೊಲೆ ಮಾಡಿರುವ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

CRIME

ಜಾಹೀರಾತು
ಜಾಹೀರಾತು
ಜಾಹೀರಾತು

ಅವಿನಾಶ್ ತಮ್ಮ ಎರಡೂವರೆ ವರ್ಷದ ಮಗುವಿಗೆ ಹಲ್ಲುಜ್ಜದೇ ಚುಂಬಿಸಲು ಮುಂದಾಗಿದ್ದಾನೆ. ಇದನ್ನು ಪತ್ನಿ ದೀಪಿಕಾ ವಿರೋಧಿಸಿದ್ದರಿಂದ ಪತ್ನಿಯನ್ನು ಹತ್ಯೆ ಮಾಡಿದ್ದಾನೆ.

ತಮ್ಮ ಮಗುವಿಗೆ ಪತಿ ಮುತ್ತಿಡುವುದನ್ನು ವಿರೋಧಿಸಿದ್ದರಿಂದಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಇಬ್ಬರ ಮಾತು ಆಕ್ರೋಶಕ್ಕೆ ತಿರುಗಿದ್ದು, ಪತಿ ಅವಿನಾಶ್ ಚಾಕುವಿನಿಂದ ದೀಪಿಕಾ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯೆ ಚೀರಾಟ ಕೇಳಿದ ಸ್ಥಳೀಯರು ದೀಪಿಕಾಳ ರಕ್ಷಣೆಗೆ ಧಾವಿಸಿದ್ದಾರೆ. ಕೂಡಲೇ ಆಕೆಯನ್ನು ಪೆರಿಂತಲ್ಮನ್ನಾ ಬಳಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರ ರಕ್ತಸ್ತಾçವದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.