Friday, November 22, 2024
ಕುಂದಾಪುರಸುದ್ದಿ

“ಉದಯಪುರದಲ್ಲಿ ನಡೆದಿರುವ ಘಟನೆ ನಿಜಕ್ಕೂ ಖಂಡನೀಯ, ಇದ್ಯಾವುದಕ್ಕೂ ನಾವು ಜಗ್ಗಲ್ಲ” ಸಚಿವ ಅಶ್ವಥ್ ನಾರಾಯಣ್- ಕಹಳೆ ನ್ಯೂಸ್

ಕುಂದಾಪುರ: ಭಾರತೀಯರ ಶಾಂತಿಯುತವಾಗಿ ವಸುದೈವ ಕುಟುಂಬಕ0 ಕಲ್ಪನೆಯೊಂದಿಗೆ ವಿಶ್ವದೊಂದಿಗೆ ಬಾಳುತ್ತಿದ್ದೇವೆ. ನೂರಾರು ಸವಾಲನ್ನು ಎದುರಿಸಿರುವ ದೇಶಕ್ಕೆ ಅಪಾರವಾದ ಶಕ್ತಿ ಇದೆ. ಉದಯಪುರದಲ್ಲಿ ನಡೆದಿರುವ ಘಟನೆ ನಿಜಕ್ಕೂ ಖಂಡನೀಯ, ಇದ್ಯಾವುದಕ್ಕೂ ನಾವು ಜಗ್ಗಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ

ಕುಂದಾಪುರದಲ್ಲಿ ಪತ್ರಕರ್ತ ಜೊತೆ ಮಾತನಾಡಿದ ಇವರು ‘ಅಮಾಯಕನ ಶಿರಚ್ಚೇದ ಮಾಡುವ ಮೂಲಕ ಗೊಡ್ಡು ಬೆದರಿಕೆ ನಮಗೆ ಹಾಕಿರುವುದಲ್ಲ, ಕೃತ್ಯ ಎಸಗಿದ ವ್ಯಕ್ತಿಗಳ ಮನಸ್ಥಿತಿಯನ್ನು ಈ ಕೌರ್ಯದ ಮೂಲಕ ತಮ್ಮ ಹೀನತೆಯನ್ನು ಪ್ರದರ್ಶಿಸಿದ್ದಾರೆ. ಕೀಳು ಮಟ್ಟದ ಯೋಜನೆ ಮತ್ತು ಸಂಸ್ಕೃತಿಯನ್ನು ವ್ಯಕ್ತಪಡಿಸಿದ್ದಾರೆ . ಇದು ಅವರ ವಿನಾಶ, ಆ ವ್ಯಕ್ತಿಗಳ ವಿನಾಶ, ಧರ್ಮದ ಪರವಾಗಿ ಒಳ್ಳೆಯ ಸಂದೇಶ ನೀಡಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲಾ ರೀತಿಯ ಭಾವನೆ, ಸಂಸ್ಕೃತಿ, ಧರ್ಮವನ್ನು ಕಾಪಾಡಿಕೊಂಡು, ಅನುಷ್ಠಾನ ಮಾಡಿ ನಡೆಸಿಕೊಂಡು ಹೋಗಲು ಅವಕಾಶವಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾವ ಧರ್ಮದಲ್ಲೂ ಹೇಳಿಲ್ಲ, ಅಧರ್ಮಿಗಳು, ಮೂಡರು, ಮುಟ್ಟಾಳರು ಇದನ್ನು ಮಾಡಿದ್ದಾರೆ ಈ ಘಟನೆಯನ್ನು ಖಂಡಿಸುತ್ತೇನೆ. ಕಾನೂನಿನ ಕ್ರಮವನ್ನು ಸಂಪೂರ್ಣವಾಗಿ ವಹಿಸಿ, ಇಂತಹ ಕೌರ್ಯ ಮರು ಕಳಿಸದಂತೆ ಸಂಬAಧ ಪಟ್ಟ ರಾಜ್ಯ ಸರಕಾರ ಮಾಡಬೇಕು, ಆ ಮೂಲಕ ಪ್ರಜೆಗಳಿಗೆ ಒಳ್ಳೆಯ ಸಂದೇಶ ನೀಡಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಯಲ್ಲಿ ಸರಕಾರಿ ಕಾಲೇಜ್ ಸ್ಥಾಪನೆ ವಿಚಾರದಲ್ಲಿ ಮಾತನಾಡಿ , ಜಿಲ್ಲೆಗೊಂದು ಸರಕಾರಿ ಕಾಲೇಜ್ ಸ್ಥಾಪನೆಯ ಬಗ್ಗೆ ಹಂತ ಹಂತವಾಗಿ ಯೋಜನೆ ನಡೆಯುತ್ತಿದೆ. ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಉಡುಪಿ ಜಿಲ್ಲೆಯ ಬಗ್ಗೆ ವಿಶೇಷ ಯೋಜನೆ ರೂಪಿಸುತ್ತೇವೆ ಎಂದು ತಿಳಿಸಿದರು

ಜಾಹೀರಾತು
ಜಾಹೀರಾತು
ಜಾಹೀರಾತು