Recent Posts

Sunday, January 19, 2025
ಕ್ರೈಮ್ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅಣ್ಣ ಗುಣರಂಜನ್ ಶೆಟ್ಟಿ ಕೊಲೆ ಸ್ಕೆಚ್ ಪ್ರಕರಣ ; ಮಂಗಳೂರು ಪೊಲೀಸ್ ನೋಟೀಸ್ ಹಿನ್ನಲೆ, ಗುಣರಂಜನ್ ಶೆಟ್ಟಿ ವಿಚಾರಣೆಗೆ ಹಾಜರು – ಕಹಳೆ ನ್ಯೂಸ್

ಮಂಗಳೂರು (ಜೂ.29): ಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರ ಅಣ್ಣ ಗುಣ ರಂಜನ್ ಶೆಟ್ಟಿ (Gunaranjan Shetty ) ಕೊಲೆ ಸ್ಕೆಚ್ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ, ಮಂಗಳೂರು ಪೊಲೀಸರು (Mangaluru police) ಗುಣ ರಂಜನ್ ಶೆಟ್ಟಿಗೆ ನೋಟಿಸ್ ನೀಡಿದ್ದು, ಜೂನ್ 29 ರಂದು  ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಗೆ ಹಾಜರಾಗಲು ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ  ಗುಣರಂಜನ್ ಶೆಟ್ಟಿ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ (Muthappa Rai) ಅಪ್ತ ಬಳಗದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು,  ಜಯಕರ್ನಾಟಕ ಸಂಘಟನೆಯ (Jaya Karnataka) ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ಆರೋಪ ಕೇಳಿ ಬಂದಿತ್ತು. ಮುತ್ತಪ್ಪ ರೈಗೆ ಕೈ ಕೊಟ್ಟಿದ ಮನ್ಮಿತ್ ರೈ ಹಾಗೂ ರಾಕೇಶ್ ಮಲ್ಲಿ ಕೊಲೆಗೆ ಸ್ಕೆಚ್ ಹಾಕಿರುವ ಬಗ್ಗೆ ಪೋಲೀಸರು ಮೂಲಗಳು ಸೂಚ್ಯವಾಗಿ ತಿಳಿಸಿತ್ತು. ಹೀಗಿದ್ದರೂ ಮನ್ಮಿತ್ ರೈ ತಾನು ಬ್ಯುಸಿನೆಸ್ ವಿಚಾರವಾಗಿ ವಿದೇಶದಲ್ಲಿರುವುದಾಗಿ ಹೇಳಿಕೊಂಡಿದ್ದ, ಈ ಸಂದರ್ಭದಲ್ಲಿ ಆತನ ಕೆಲವು ಪ್ರಚೋದಕ ಮತ್ತು ತನ್ನನ್ನು ತಾನು ಡಾನ್ ಎಂಬಂತೆ ತಾನೇ ಬಿಂಬಿಸಿಕೊಳ್ಳುತ್ತಿದ್ದ ವಿಡಿಯೋಗಳು ಹಾಗೂ ತಾನು ಬೆದರಿಕೆ ಒಡ್ಡಿದ ಪೋಸ್ಟ್ ಗಳು ವೈರಲ್ ಆಗಿದ್ದು, ಈ ಗುಮಾನಿಗೆ ಮತ್ತಷ್ಟು ಪುಷ್ಟಿ ನೀಡಿತ್ತು, ಹಾಗೂ ರಾಕೇಶ್ ಮಲ್ಲಿಯ ವಿಚಾರಣೆಯನ್ನೂ ಪೋಲೀಸರು ನಡೆಸಿದ್ದ ಬಗ್ಗೆ ಉತ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜೀವ ಬೆದರಿಕೆಯಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಭದ್ರತೆ ನೀಡುವಂತೆ ಮನವಿ ಮಾಡಿದ್ದರು. ಒಂದು ಕಾಲದಲ್ಲಿ ಗುಣರಂಜನ್ ಶೆಟ್ಟಿ ಹಾಗೂ ರಾಕೇಶ್ ಮಲ್ಲಿ, ಮುನ್ಮಿತ್ ರೈ ಇಬ್ಬರೂ ಮುತ್ತಪ್ಪ ರೈ ಆಪ್ತವಲಯದಲ್ಲಿಯೇ ಗುರುತಿಸಿಕೊಂಡಿದ್ದರು. ಇದೀಗ ಇವರ ನಡುವೆ ವೈಷನ್ಯವಿದೆ ಎನ್ನಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಮಿತ್ ರೈ ಜೊತೆಗೆ ಸಣ್ಣಪುಟ್ಟ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದ, ಮಂಗಳೂರು ಅನೂಶ್ ರೈ ಯನ್ನೂ ಪೋಲೀಸರು ಬೆಂಡೆತ್ತಿದ್ದರು.. ಇದೀಗ ಗುಣರಂಜನ್ ಶೆಟ್ಟಿ ಹೇಳಿಕೆಯನ್ನು ಪೋಲೀಸರು ಪಡೆಯುವ ಉದ್ದೇಶದಿಂದ ನೋಟೀಸ್ ನೀಡಿದ್ದಾರೆ ಎನ್ನಲಾಗುತ್ತಿದೆ.