Friday, November 22, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ್ದ ಬಾಲಪ್ರತಿಭೆ ಜ್ಞಾನ ಗುರುರಾಜ್ ಗೆ ಸಾಲುಮರದ ತಿಮ್ಮಕ್ಕ ಪ್ರಶಸ್ತಿ-ಕಹಳೆ ನ್ಯೂಸ್

ಪುತ್ತೂರು: ತನ್ನ ಸಣ್ಣ ವಯಸ್ಸಿನಲ್ಲಿಯೇ ತೊದಲು ನುಡಿಯ ಮೂಲಕ ದೇಶದಾದ್ಯಂತ ಜನರ ಗಮನ ಸೆಳೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ್ದ ಪುಟ್ಟ ಬಾಲೆ ಜ್ಞಾನ ಗುರುರಾಜ್ ಅವರಿಗೆ ಸಾಲುಮರದ ತಿಮ್ಮಕ್ಕ ಪ್ರಶಸ್ತಿ ಒಲಿದಿದೆ.ಬೆಂಗಳೂರಿನ ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಶನಲ್ ಫೌಂಡೇಶನ್ ಕೊಡ ಮಾಡುವ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ ಗೆ ಈ ಬಾರಿ ವಿವಿಧ ಕ್ಷೇತ್ರಗಳ ಹನ್ನೊಂದು ಸಾಧಕರನ್ನು ಆಯ್ಕೆ ಮಾಡಲಾಗಿದ್ದು ಸಂಗೀತ ಕ್ಷೇತ್ರದಿಂದ ಬಾಲಪ್ರತಿಭೆ ಜ್ಞಾನ ಗುರುರಾಜ್ ಆಯ್ಕೆಯಾಗಿದ್ದಾರೆ.

ಶಾಸಕ ಡಾ.ಜಿ.ಪರಮೇಶ್ವರ್ ನೇತೃತ್ವದ ಆಯ್ಕೆ ಸಮಿತಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜೂ.30ರಂದು ನಡೆಯುವ ತಿಮ್ಮಕ್ಕ ಅಭಿನಂದನಾ ಸಮಾರಂಭ ಹಾಗೂ ಪರಿಸರ ಜಾತ್ರೆಯಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಗೌರವಾರ್ಪಣೆ ನಡೆಯಲಿದೆ. ಪ್ರಶಸ್ತಿಯು ತಲಾ 25 ಸಾವಿರ ರೂ ನಗದು, ಬೆಳ್ಳಿಪದಕ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿದೆ. ಕಿರಿಯ ವಯಸ್ಸಿನಲ್ಲಿಯೇ ಹಿರಿಯ ಗರಿಮೆ ಪಡೆದಿರುವ ಜ್ಞಾನರವರು ಕನ್ನಡ ವಾಹಿನಿಯ ‘ಸರಿಗಮಪ’ದ ಮೂಲಕ ಖ್ಯಾತಿ ಪಡೆದಿದ್ದರು. ಆರು ವರ್ಷ ಪ್ರಾಯದ ಈ ಪೋರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡೂವರೆ ವರ್ಷದಲ್ಲೇ ಸಂಗೀತ ಲೋಕಕ್ಕೆ ಏರಿದ್ದ ಈ ಪುಟ್ಟ ಬಾಲೆ ತೊದಲು ನುಡಿಯುವ ವಯಸ್ಸಿನಲ್ಲೇ ತನ್ನ ಮುದ್ದು ಮುದ್ದಾದ ಕಂಠದಲ್ಲಿ 20ಕ್ಕೂ ಅಧಿಕ ಪದ್ಯಗಳನ್ನು ಹಾಡಿ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದರು. ಇವರು ಈಗಾಗಲೇ 125ಕ್ಕೂ ಅಧಿಕ ಮೆಡಲ್ಸ್ ಹಾಗೂ ಟ್ರೋಫಿಯನ್ನು
ತನ್ನ ಮುಡಿಗೇರಿಸಿಕೊಂಡಿದ್ದಾರೆ. ಮೂಲತಃ ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಟ್ಟೆ ಇಡ್ಯಡ್ಕದವರಾಗಿರುವ ಜ್ಞಾನರವರು ನೂರಾರು ವೇದಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿದ್ದಾರೆ. ಟಿ.ವಿ. ಶೋಗಳಲ್ಲಿ ಭಾಗವಹಿಸಿ ಖ್ಯಾತ ನಟರಿಂದ, ಮಾಂತ್ರಿಕರಿಂದ ಭೇಷ್ ಸಂಗೀತ ಎನಿಸಿಕೊಂಡಿದ್ದಾರೆ.

ಮೂಲತಃ ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಟ್ಟೆ ಇಡ್ಯಡ್ಕದವರಾಗಿರುವ ಜ್ಞಾನರವರು ನೂರಾರು ವೇದಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿದ್ದಾರೆ. ಟಿ.ವಿ. ಶೋಗಳಲ್ಲಿ ಭಾಗವಹಿಸಿ ಖ್ಯಾತ ನಟರಿಂದ, ಸಂಗೀತ ಮಾಂತ್ರಿಕರಿಂದ ಭೇಷ್ ಎನಿಸಿಕೊಂಡಿದ್ದಾರೆ.
ಜ್ಞಾನರವರ ತಾಯಿ ರೇಖಾ ಕೊಂಬಾರು ಗ್ರಾಮದ ಕಟ್ಟೆ ಇಡ್ಯಡ್ಕದವರಾಗಿದ್ದು ಬೆಂಗಳೂರಿನ ರಾಮನಗರ ಆನುಮಾನ ಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿದ್ದಾರೆ. ಜ್ಞಾನರವರ ತಂದೆ ಗುರುರಾಜ್ ಬೆಂಗಳೂರಿನಲ್ಲಿ ಸಂಗೀತ ಗುರುಗಳಾಗಿದ್ದಾರೆ. ಸಂಗೀತ ಶಿಕ್ಷಕರ  ಪುತ್ರಿಯಾಗಿರುವ ಜ್ಞಾನರವರು ಎರಡು ವರ್ಷದ ಹಿಂದೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಮಯದಲ್ಲಿ ಮಹಾಲಿಂಗೇಶ್ವರ ದೇವರ ಕುರಿತಾಗಿ ಹಾಡಿದ್ದ
ಹಾಡೊಂದು ವ್ಯಾಪಕ ವೈರಲ್ ಆಗಿತ್ತಲ್ಲದೆ ಸಾವಿರಾರು ಮಂದಿಯ ಮೆಚ್ಚುಗೆ ಪಡೆದಿತ್ತು. ಬಳಿಕ ಮತ್ತಷ್ಟು ಮಿಂಚಿರುವ ಜ್ಞಾನರವರು ಹಲವು ಆಲ್ಬಮ್ ಗಳಿಗೂ ಧ್ವನಿ ನೀಡಿದ್ದಾರೆ.