Friday, November 22, 2024
ಕಾಸರಗೋಡುರಾಜಕೀಯರಾಷ್ಟ್ರೀಯಸುದ್ದಿ

ಮದರಸಾಗಳಲ್ಲಿ ಮಕ್ಕಳಿಗೆ ರುಂಡ ಕತ್ತರಿಸುವ ಕಾನೂನನ್ನೇ ಬೋಧಿಸಲಾಗುತ್ತಿದೆ ; ಮದರಸಾ ಶಿಕ್ಷಣದ ವಿರುದ್ಧ ಆರಿಫ್ ಮೊಹಮ್ಮದ್ ಖಾನ್ ಆಕ್ರೋಶ – ಕಹಳೆ ನ್ಯೂಸ್

ತಿರುವನಂತಪುರಂ: ರುಂಡ ಕತ್ತರಿಸಬೇಕು ಎನ್ನುವುದು ಮುಸ್ಲಿಂ ದೊರೆಗಳು ಮಾಡಿದ ಕಾನೂನು. ಇದೇ ಕಾನೂನನ್ನು ಮದರಸಾಗಳಲ್ಲಿ ಮಕ್ಕಳಿಗೆ ಬೋಧಿಸಲಾಗುತ್ತಿದೆ ಎಂದು ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕಿಡಿ ಕಾರಿದ್ದಾರೆ.

ರಾಜಾಸ್ಥಾನದ ಉದಯಪುರದಲ್ಲಿ ಹಿಂದೂ ವ್ಯಕ್ತಿಯ ರುಂಡ ಕತ್ತರಿಸಿದ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಪ್ರಮುಖ ಸಿನಿ ತಾರೆಯರೂ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಕೇರಳದ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಖಂಡನೆ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಉದಯಪುರದಂತಹ ಘಟನೆಗಳಿಗೆ ಮದರಸಾ ಶಿಕ್ಷಣವೇ ಕಾರಣ. ಇಂತಹ ಶಿಕ್ಷಣ ಮಕ್ಕಳಿಗೆ ಅಗತ್ಯವಿಲ್ಲ. ಮುಸ್ಲಿಂ ಲಾ(ಮುಸ್ಲಿಂ ಕಾನೂನು), ಖುರಾನ್‌ನಲ್ಲಿಯೂ ರುಂಡ ಕತ್ತರಿಸಬೇಕೆಂಬ ಕಾನೂನು ಇಲ್ಲ. ಇದು ಮುಸ್ಲಿಂ ದೊರೆಗಳು ಮಾಡಿದ ಕಾನೂನು. ಆಗ ಮುಸ್ಲಿಂ ಧರ್ಮಕ್ಕೆ ವಿರುದ್ಧವಾಗಿ ನಡೆದರೆ ರುಂಡ ಕತ್ತರಿಸುವ ಅಧಿಕಾರ ಇತ್ತು. ಇದೇ ಕಾನೂನನ್ನು ಮದರಸಾಗಳಲ್ಲಿ ಬೋಧಿಸಲಾಗುತ್ತದೆ ಎಂದು ಮದರಸಾ ಶಿಕ್ಷಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮದರಸಾ ಶಿಕ್ಷಣವು ಸಂಕುಚಿತ ಹಾಗೂ ಧರ್ಮಾಧಾರಿತ ಶಿಕ್ಷಣವಾಗಿದೆ. ಮಕ್ಕಳಲ್ಲಿ ವಿಷಬೀಜ ಬಿತ್ತುವ ಕೆಲಸವನ್ನೂ ಮಾಡುತ್ತಿದೆ. ಇಲ್ಲಿ ಧರ್ಮಾಂಧತೆ ಬೋಧಿಸಲಾಗುತ್ತಿದೆ. ಇದರ ಪರಿಣಾಮವೇ ಉದಯಪುರದಲ್ಲಿ ನಡೆದ ಹತ್ಯೆ ಎಂದು ಆರೋಪಿಸಿದ್ದಾರೆ.

ಆಧುನಿಕ ಶಿಕ್ಷಣ ಮಕ್ಕಳ ಹಕ್ಕು: ಚಿಕ್ಕ ಮಕ್ಕಳಲ್ಲೇ ವಿಷ ಬೀಜ ಬಿತ್ತುವುದರಿಂದ ಅವರ ಮನಸ್ಸಿನಲ್ಲಿ ಗಾಢ ಪರಿಣಾಮ ಬೀರುತ್ತಿದೆ. 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ನೀಡುವ ವಿದ್ಯಾಭ್ಯಾಸವು ಧರ್ಮಾಧಾರಿತ ಆಗಿರಬಾರದು. ಇದು ಮಕ್ಕಳ ಹಕ್ಕಾಗಿದೆ. ಆಧುನಿಕ ಶಿಕ್ಷಣ ಪಡೆಯುವುದು ಅವರ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.