
ಮಂಗಳೂರು : ಹಜ್ ಭವನಕ್ಕೆ ಟಿಪ್ಪು ಹೆಸರು ಇಡುವುದರಲ್ಲಿ ತಪ್ಪೇನಿಲ್ಲ. ಟಿಪ್ಪು ಹೆಸರಿಂದಲೇ ಕಾಂಗ್ರೆಸ್ ಗೆ ಸೋಲಾಗಿದೆ ಅನ್ನೋದು ತಪ್ಪು ಎಂದು ಕಾಂಗ್ರೆಸ್ ನಾಯಕಿ ಮೋಟಮ್ಮ ಧರ್ಮಸ್ಥಳದಲ್ಲಿ ಹೇಳಿದ್ದಾರೆ.
ಒಬ್ಬ ಶ್ರೇಷ್ಠ ವ್ಯಕ್ತಿ, ಹೋರಾಟಗಾರರ ಹೆಸರನ್ನು ಹಜ್ ಭವನಕ್ಕೆ ಇಡುವುದರಲ್ಲಿ ತಪ್ಪಿಲ್ಲ. ಆದರೆ ಹಠಕ್ಕೆ ಬಿದ್ದು ಹೆಸರಿಡೋದು ಸರಿಯಲ್ಲ. ನಿಜವಾದ ಗೌರವದಿಂದ ನಾಯಕರ ಮೇಲಿನ ವಿಶ್ವಾಸಕ್ಕೆ ಆ ಹೆಸರಿಡುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಸಮಾಜಕ್ಕಾಗಿ ಬಹಳಷ್ಟು ಒಳ್ಳೆ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಅಂದಿನಿಂದಲೂ ನೆಹರೂ, ರಾಜೀವ್ ಗಾಂಧಿ ಕಾಲದಿಂದ ಒಳ್ಳೆ ಕೆಲಸವನ್ನು ಮಾಡಿಕೊಂಡು ಬಂದಿದೆ. ಸಿದ್ದರಾಮಯ್ಯ ಟಿಪ್ಪು ಜಯಂತಿಯನ್ನು ಮಾಡಿದ್ದರು. ಅದೊಂದೇ ತಪ್ಪು ಎಂದು ನೋಡಬಾರದು. ಜನರಿಗೆ ಸಿದ್ದರಾಮಯ್ಯ ಸರ್ಕಾರ ಕೊಟ್ಟ ಭಾಗ್ಯಗಳಿಗೆ ಬೆಲೆ ಇಲ್ಲವಾ. ಎಲ್ಲಾ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಕೂಡ ಸರ್ಕಾರದ ಕಾರ್ಯಕ್ರಮವಾಗಿ ಮಾಡುತ್ತಿದೆ. ಆದ್ದರಿಂದ ನಾವು ಕೆಲವೊಂದನ್ನು ಮಾತ್ರ ಯಾಕೆ ಕೆಟ್ಟ ದೃಷ್ಟಿಯಿಂದ ನೋಡಬೇಕು ಎಂದು ಮೋಟಮ್ಮ ವಿರೋಧ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದರು.