Sunday, November 24, 2024
ಸುದ್ದಿ

ದಕ್ಷಿಣ ಕನ್ನಡದ ಹಳ್ಳಿಯಿಂದ ಅಮೆರಿಕೆಗೆ ಹೊರಟಿದ್ದಾನೆ ಕಡೆಗೋಲು ಕೃಷ್ಣ…..!! – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗವಾದ ಸಜೀಪಮೂಡ ಗ್ರಾಮದ ಕಂದೂರಿನಿಂದ ಇನ್ನು ಕೆಲವೇ ದಿನಗಳಲ್ಲಿ ಉಡುಪಿಯ ಶ್ರೀ ಕಡೆಗೋಲು ಶ್ರೀ ಕೃಷ್ಣ, ಮಠದ ಮಾದರಿ ಹಾಗೂ ವಿವಿಧ ದೇವರ ವಿಗ್ರಹಗಳು ದೂರದ ಅಮೆರಿಕೆಗೆ ಪ್ರಯಾಣ ಬೆಳೆಸಲಿವೆ.!

ಇಲ್ಲಿನ ಸತ್ಯಶ್ರೀ ಕಲಾಬಳಗದ ಕಲಾವಿದ ಎಂ. ಕೇಶವ ಸುವರ್ಣ ಅವರು ರಚಿಸಿರುವ ಫೈಬರ್ ಮೋಲ್ಡ್‍ನ ಈ ವಿಗ್ರಹಗಳು ಅಮೆರಿಕಾದಲ್ಲಿ ಕನ್ನಡಿಗರ ಗಮನಸೆಳೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ 6 ಆಡಿಯ ಕಡೆಗೋಲು ಕೃಷ್ಣನ ವಿಗ್ರಹ ಪೂರ್ಣವಾಗಿ ಸಿದ್ದವಾಗಿದ್ದರೆ, ಉಳಿದಂತೆ ಮಠದ ಗೋಪುರ ಮಾದರಿ, ಬಲಮುರಿ ಗಣಪತಿ, ಅಷ್ಟಭುಜ ದುರ್ಗೆ, ಮಹಿಷಾಸುರ, ಬಿರುದಾವಳಿ, ತಟ್ಟೆರಾಯರ ವಿಗ್ರಹಗಳು ಅಂತಿಮ ಸ್ಪರ್ಶದಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಮೆರಿಕಾ ಪಯಣ ಇದೇ ಮೊದಲು
ಬಂಟ್ವಾಳ ತಾಲೂಕಿನ ಕಂದೂರು ಎಂಬ ಪುಟ್ಟ ಪ್ರದೇಶದಿಂದ ಅಮೇರಿಕಾದ ಟೆಕ್ಸಾಸ್‍ನ ಹ್ಯೂಸ್ಟನ್ ನಗರಕ್ಕೆ ವಿಗ್ರಹಗಳು ರಫ್ತಾಗುವುದು ಇದೇ ಮೊದಲಾಗಿದ್ದು, ಕಲಾವಿದ ಕೇಶವ ಸುವರ್ಣ ಮತ್ತು ಅವರ ಸಹ ಕಲಾವಿದರಿಗೆ ಖುಷಿ ಸಂಗತಿ ಒಂದೆಡೆ ಯಾದರೆ, ತಾಲೂಕಿಗೆ ಹೆಮ್ಮೆಯ ವಿಚಾರ ಇನ್ನೊಂದೆಡೆ. ಅಮೆರಿಕಾದ ಟೆಕ್ಸಾಸ್‍ನ ಹ್ಯೂಸ್ಟನ್ ನಗರದಲ್ಲಿ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ನೇತೃತ್ವದ ಶ್ರೀಕೃಷ್ಣ ವೃಂದಾವನದಲ್ಲಿ ನಡೆಯಲಿರುವ ಶ್ರೀಕೃಷ್ಣಾಷ್ಠಮಿ, ಗಣೇಶೋತ್ಸವ, ದಸರಾ ಹಬ್ಬಗಳಿಗೆ ಪೂರಕವಾಗಿ ಈ ವಿಗ್ರಹವನ್ನು ತಯಾರಿಸಲಾಗಿದೆ ಎಂದು ಬಿ.ಸಿ. ರೋಡಿನ ಕೈಕುಂಜ ನಿವಾಸಿ ಅಮೇರಿಕಾದಲ್ಲಿ ಉದ್ಯೋಗಿಯಾಗಿರುವ ಸಹಾಸ್ ಐತಾಳ್ ಅವರು ತಿಳಿಸಿದ್ದಾರೆ.

ಹಡಗಿನ ಮೂಲಕ ಪ್ರಯಾಣ

ಕೃಷ್ಣನ ವಿಗ್ರಹ ಹೊರತುಪಡಿಸಿ ಇತರ ವಿಗ್ರಹವನ್ನು ಮೂರು ವಿಭಾಗವನ್ನಾಗಿಸಿ ಚೆನ್ನೈಯಿಂದ ಹಡಗಿನ ಮೂಲಕ ಅಮೆರಿಕಾಕ್ಕೆ ಸಾಗಿಸಲಾಗುತ್ತಿದೆ. ಶ್ರೀಕೃಷ್ಣಾಷ್ಠಮಿಗೆ ಶ್ರೀಕೃಷ್ಣ, ಗಣೇಶೋತ್ಸವಕ್ಕೆ ಬಲಮುರಿ ಗಣಪತಿ ಹಾಗೂ ದಸರಾ ಸಂದರ್ಭ ಅಷ್ಟಭುಜ ದೇವಿಯ ವಿಗ್ರಹವನ್ನುರಿಸಿ ಪ್ರದರ್ಶಿಸಲಾಗುತ್ತದೆ.