Sunday, January 19, 2025
ಸಂತಾಪಸುದ್ದಿ

ಮಂಗಳೂರು: ಕೆನರಾ ಹೈಸ್ಕೂಲ್ ‌ಅಸೋಸಿಯೇಶನ್ ಅಧ್ಯಕ್ಷ ಅಣ್ಣಪ್ಪ ಪೈ ವಿಧಿವಶ– ಕಹಳೆ ನ್ಯೂಸ್

ಮಂಗಳೂರು: ಕೆನರಾ ಹೈಸ್ಕೂಲ್ ‌ಅಸೋಸಿಯೇಶನ್ ಅಧ್ಯಕ್ಷ ಅಣ್ಣಪ್ಪ ಪೈ (74) ಅವರು ಬೆಂಗಳೂರಿನಲ್ಲಿ ನಿನ್ನೆ ದೈವಾಧೀನರಾಗಿದ್ದಾರೆ.

ಸಾಹುಕಾರ್ ಬಾಬಾ ಪೈ ಮನೆತನದವರಾದ ಅಣ್ಣಪ್ಪ ಪೈ ರಾಘವೇಂದ್ರ ರಂಗ ಪೈ ಅವರ ಸುಪುತ್ರರಾಗಿದ್ದು ಖ್ಯಾತ ಸಂಸ್ಥೆ ಮಾಡರ್ನ್ ಕಿಚನ್ ಇದರ ಪಾಲುದಾರರಾಗಿ, ಪರೋಪಕಾರಿಯಾಗಿ ಮತ್ತು ಸಮಾಜದ ಸೇವಾ ಚಟುವಟಿಕೆಗಳಲ್ಲಿ ತೊಡಗಿ ಜನಪರ ಕಾಳಜಿಯನ್ನು ಹೊಂದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಷ್ಟೇ ಅಲ್ಲದೆ ಜಿಲ್ಲಾ ಸಣ್ಣ ಕೈಗಾರಿಕಾ ಅಸೋಸಿಯೇಶನ್ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಅಧ್ಯಕ್ಷರಾಗಿ, ಮಾರ್ಡನ್ ಕಿಚನ್ & ಪ್ರೆಸ್ಟೋ ಬ್ರಾಂಡಿನ ಉತ್ಪನ್ನಗಳ ಯಶಸ್ಸಿನ ಹಿಂದಿನ ಪ್ರೇರಣಾ ಶಕ್ತಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಪತ್ನಿ, ಇಬ್ಬರು ಪುತ್ರರಾದ ಒರೆಕಲ್ ಕಂಪೆನಿಯ ಅರವಿಂದ ಪೈ, ಡೆಲಿವರಿ ಲಾಜಿಸ್ಟಿಕ್ ನಿರ್ದೇಶಕ ಅಜಿತ್ ಪೈ ಹಾಗೂ ಅಪಾರ ಸಂಖ್ಯೆಯ ಬಂಧು, ಮಿತ್ರರನ್ನು ಅಗಲಿದ್ದಾರೆ.

ಗುರುವಾರ ಮಧ್ಯಾಹ್ನ ಮಂಗಳೂರಿನಲ್ಲಿರುವ ಅವರ ಸ್ವಗೃಹದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.