Sunday, January 19, 2025
ಆರೋಗ್ಯ

ಹತ್ತೂರಿಗೂ ಉಪಯುಕ್ತವಾಗಲಿ ಪುತ್ತೂರಿನ ಸುಸರ್ಜಿತವಾದ ಆಯುರ್ವೇದ ಪಂಚಕರ್ಮ ಚಿಕಿತ್ಸೆ ಕೇಂದ್ರ ” ಕಲ್ಯ ಆಯುರ್ವೇದಮ್ ” – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಜವಳಿ ಮಳಿಗೆ ಎಂ. ಸಂಜೀವ ಶೆಟ್ಟಿ ಪ್ರವರ್ತಿತ ಸುಸಜ್ಜಿತವಾದ ಆಯುರ್ವೇದಿಕ್ ಪಂಚಕರ್ಮ ಸೆಂಟರ್ ಕಲ್ಯ ಆಯುರ್ವೇದಮ್ ಜೂ.21ರಂದು ಬೊಳುವಾರು ಜಿ.ಎಲ್. ಟ್ರೇಡ್ ಸೆಂಟರ್‍ನಲ್ಲಿ ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಉಡುಪಿ ಎಸ್‍ಡಿಎಂ ಆಯುರ್ವೇದ ಮೆಡಿಕಲ್ ಕಾಲೇಜಿನ ಡೀನ್ ಡಾ. ನಾಗರಾಜ್ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ವಿಶಿಷ್ಠ ಶೈಲಿಯ ಆಯುರ್ವೇದ ಸೌಲಭ್ಯಗಳು ಕೇವಲ ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಮಾತ್ರ ಚಾಲ್ತಿಯಲ್ಲಿತ್ತು. ಆದರೆ ಇಂದು ಅದನ್ನು ಪುತ್ತೂರಿನಂತಹ ಪಟ್ಟಣದಲ್ಲಿ ಆರಂಭಿಸುವ ಮೂಲಕ ರಾಜಧಾನಿಯ ಕಲ್ಪನೆಯನ್ನು ಸಂಜೀವ ಶೆಟ್ಟಿ ಕುಟುಂಬಿಕರು ಸಾಕಾರಗೊಳಿಸಿದ್ದಾರೆ ಎಂದು ಹೇಳಿದರು. ಆಯುರ್ವೇದ ವಿದ್ಯೆಯನ್ನು ಕಲಿಯುವ ವಿದ್ಯಾರ್ಥಿಯು ನಿರೋಗಿ(ಕಲ್ಯ)ಯಾಗಿರಬೇಕು. ಇದೇ ಹಿನ್ನೆಲೆಯಿಂದಲೇ ಆಯುರ್ವೇದ ಸೆಂಟರ್‍ನ ವೈದ್ಯೆ ಡಾ. ಹರಿಣಿಯವರು ಬಂದಿದ್ದಾರೆ. ಸಣ್ಣ ವಯಸ್ಸಾದರೂ ಅವರದು ಊಹೆಗೂ ನಿಲುಕದ ಚಿಂತನೆಯಾಗಿದ್ದು ಅಂತಹ ಸಕಲ ಸೌಲಭ್ಯಗಳು ಕೇಂದ್ರದಲ್ಲಿದೆ. ಸಂಜೀವ ಶೆಟ್ಟಿಯವರ ಮನೆಯ ವಾತಾವರಣವೇ ಆಯುರ್ವೇದದ ಕಲ್ಪನೆಯನ್ನು ತೋರಿಸುತ್ತದೆ. ಇದಕ್ಕೆ ಸ್ವತಃ ಸಂಜೀವ ಶೆಟ್ಟಿಯವರೇ ಸಾಕ್ಷಿಯಾಗಿದ್ದಾರೆ. 95 ವರ್ಷ ವಯಸ್ಸಾದರೂ, ಇಂದಿಗೂ ಅವರು ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹತ್ತೂರಿಗೂ ಪಸರಿಸಲಿ – ಬಲರಾಮ ಆಚಾರ್ಯ : ಮುಖ್ಯ ಅತಿಥಿಯಾಗಿದ್ದ ಪುತ್ತೂರಿನ ಪ್ರತಿಷ್ಠಿತ ಸ್ವರ್ಣೋಧ್ಯಮಿ, ಜಿ.ಎಲ್. ಟ್ರೇಡ್ ಸೆಂಟರ್‍ನ ಮಾಲಕ ಬಲರಾಮ ಆಚಾರ್ಯ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ವೃತ್ತಿಯ ಕುರಿತು ಗೌರವ, ಇಚ್ಛಾಶಕ್ತಿಯಿದ್ದರೆ ನಮ್ಮ ಗುರಿ ಈಡೇರುವುದರಲ್ಲಿ ಸಂಶಯವೇ ಇಲ್ಲ. ಸಕಲ ಸೌಲಭ್ಯಗಳೊಂದಿಗೆ ಪ್ರಾರಂಭಗೊಂಡಿರುವ ಕಲ್ಯ ಆಯುರ್ವೇದ ಸೆಂಟರ್‍ನಲ್ಲಿ ರೋಗಿಗಳಿಗೂ ಆಹ್ಲಾದಕರ ವಾತಾವರಣವಿದೆ. ಇದು ಕೇವಲ ತಾಲೂಕು, ಜಿಲ್ಲೆಗೆ ಮಾತ್ರ ಸೀಮಿತವಾಗದೆ ರಾಜ್ಯದಾದ್ಯಂತ ಇದರ ಸಹಸಂಸ್ಥೆ ಆರಂಭಗೊಳ್ಳಲಿ ಎಂದು ಆಶಿಸಿದರು.

ವೆಲ್‍ನೆಸ್ ಸೆಂಟರ್ -ಡಾ.ರವಿಶಂಕರ್ : ಸುಶ್ರುತ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿಶಂಕರ್ ಪೆರುವಾಜೆ ಮಾತನಾಡಿ, ಕಲ್ಯ ಆಯುರ್ವೇದ ಸೆಂಟರ್ ಐಡಿಯಲ್ ವೆಲ್‍ನೆಸ್ ಸೆಂಟರ್ ಆಗಿ ರೂಪುಗೊಂಡಿದೆ. ಶರೀರದ ರೋಗಗಳನ್ನು ನಿವಾರಣೆ ಮಾಡುವುದೇ ಪಂಚಕರ್ಮಗಳ ಸಾಮಥ್ರ್ಯವಾಗಿದೆ. ಈ ಸೆಂಟರ್ ಮೂಲಕ ರೋಗವೇ ಬಾರದಂತೆ ತಡೆಗಟ್ಟುವ ಉದ್ದೇಶಗಳನ್ನು ಇಟ್ಟುಕೊಂಡು ಆರಂಭಗೊಂಡಿದೆ ಎಂದರು.

ಅರ್ಥಪೂರ್ಣ ವಿಚಾರ-ಡಾ.ಸುಧಾ ಎಸ್.ರಾವ್ : ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಸುಧಾ ಎಸ್.ರಾವ್ ಒಳ್ಳೆಯ ಉದ್ದೇಶ ಇಟ್ಟುಕೊಂಡ ಕಲ್ಯ ಆಯುರ್ವೇದ ಸಂಸ್ಥೆಯು ವಿಶ್ವ ಯೋಗದಿನಾಚರಣೆಯಂದು ಆರಂಭಗೊಂಡಿರುವುದು ಬಹಳ ಅರ್ಥಪೂರ್ಣ ವಿಚಾರವಾಗಿದೆ. ಡಾ. ಹರಿಣಿಯವರಲ್ಲಿ ಬದ್ಧತೆ ಇರುವ ಕಾರಣ ಇಂತಹ ಸಂಸ್ಥೆ ಪ್ರಾರಂಭಿಸುವಲ್ಲಿ ಶ್ರಮ ವಹಿಸಿದ್ದಾರೆ ಎಂದರು.

ಚಿಕಿತ್ಸೆಗೆ ಪೂರಕ ವಾತಾವರಣ – ಡಾ.ಹರಿಕೃಷ್ಣ: ಪರ್ಲಡ್ಕ ಎಸ್‍ಡಿಪಿ ಆಯುರ್ವೇದ ರೆಮಿಡೀಸ್‍ನ ಮುಖ್ಯಸ್ಥ ಡಾ. ಹರಿಕೃಷ್ಣ ಪಾಣಾಜೆ ಮಾತನಾಡಿ, ಆಯುರ್ವೇದ ಜನಜನಿತವಾದ ಚಿಕಿತ್ಸಾ ವಿಧಾನ. ಇದಕ್ಕೆ ಉತ್ತಮ ವಾತಾವರಣದ ಆವಶ್ಯಕತೆಯಿದ್ದು ಈ ಎಲ್ಲಾ ವ್ಯವಸ್ಥೆಗಳು ಕೇಂದ್ರದಲ್ಲಿದೆ. ಸಂಜೀವ ಶೆಟ್ಟಿ ಕುಟುಂಬದಿಂದ ಜವಳಿ ಮಳಿಗೆಯ ಜೊತೆಗೆ ಇನ್ನೊಂದು ಸಂಸ್ಥೆ ಆರಂಭವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಡಾ. ಹರಿಣಿಯವರ ಉದ್ದೇಶಗಳು ಸಾಕಾರಗೊಳ್ಳಲಿ ಎಂದು ಶುಭ ಹಾರೈಸಿದರು. ಜವುಳಿ ಉದ್ಯಮಿ ಯಂ. ಸಂಜೀವ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಲ್ಯ ಆಯುರ್ವೇದ ಪಂಚಕರ್ಮ ಸೆಂಟರ್‍ನ ಮುಖ್ಯಸ್ಥೆ ಡಾ. ಹರಿಣಿ ಸೂರಜ್ ಸ್ವಾಗತಿಸಿದರು. ನಿವೃತ್ತ ಪೆÇಲೀಸ್ ಅ„ಕಾರಿ ಸಂತೋಷ್ ಹಾಗೂ ಸತ್ಯ ಸಂತೋಷ್ ಪ್ರಾರ್ಥಿಸಿದರು.ವಿದ್ಯಾಗಿರಿಧರ್ ವಂದಿಸಿ, ಪತ್ರಕರ್ತ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು. ಗಿರಿಧರ ಶೆಟ್ಟಿ, ಶಿವಶಂಕರ ಶೆಟ್ಟಿ, ಸಂತೋಷ್ ಕುಮಾರ್, ಮುರಳೀಧರ, ವೆಂಕಟೇಶ್ ಬಾಬುಸುರೇಶ್ ಕುಮಾರ್ ಅತಿಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಡಾ.ಹರಿಣಿ ಹಾಗೂ ಸೂರಜ್ ದಂಪತಿ ಸ್ಮರಣಿಕೆ ನೀಡಿ ಅತಿಥಿಗಳನ್ನು ಗೌರವಿಸಿದರು. ಯಂ. ಸಂಜೀವ ಶೆಟ್ಟಿ ಕುಟುಂಬಿಕರು, ಪುತ್ತೂರಿನ ವೈದ್ಯರುಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.