Recent Posts

Sunday, January 19, 2025
ಸುದ್ದಿ

ಮಗಳ ಗಂಡನನ್ನೇ ಕಾಮಿಸಿದ ತಾಯಿ: ಗುಟ್ಟಾಗಿ ಬಾಳಲು ಮನೆ ಬಿಟ್ಟ ಜೋಡಿಯ ಭಯಾನಕ ಸ್ಟೋರಿ..!! – ಕಹಳೆ ನ್ಯೂಸ್

ಜೈಪುರ: ಪ್ರೇಮಕ್ಕೆ ಕಣ್ಣಿಲ್ಲ ಎನ್ನುವ ನಾಣ್ಣುಡಿ ಇದೆ. ಆದರೆ ಹೆಣ್ಣು ಕೊಟ್ಟ ಅತ್ತೆಯನ್ನೇ ಪ್ರೀತಿಸುವುದು ಎಂದರೆ? ಇದು ಒಂದೆಡೆಯಾದರೆ, ಮಗಳ ಗಂಡನನ್ನೇ ತಾಯಿ ಕಾಮಿಸುವುದು ಉಂಟೆ? ಹೀಗೆಂದು ಪ್ರಶ್ನೆ ಮಾಡುವಂತೆಯೇ ಇಲ್ಲ. ಏಕೆಂದರೆ ಅತ್ತೆ ಮತ್ತು ಅಳಿಯ ಪ್ರೀತಿಸಿ ಕೊನೆಗೆ ದುರಂತ ಅಂತ್ಯ ಕಂಡ ಘಟನೆ ರಾಜಾಸ್ಥಾನದ ಬಾರ್ಮರ್ ಗ್ರಾಮದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೋತಾರಾಮ್ (22) ಮತ್ತು ದರಿಯಾ ದೇವಿ (38) ಕೈರವ್ ಎಂಬುವವರ ಪ್ರೇಮ ಕಥೆ ಇದು. ಖರಾಂತಿಯಾ ಗ್ರಾಮದ ನಿವಾಸಿಯಾದ ದರಿಯಾ ದೇವಿ ಅವರ ಮಗಳನ್ನು ಹೋತಾರಾಮ್ ಕಳೆದ ವರ್ಷ ಮದುವೆಯಾಗಿದ್ದರು. ಮದುವೆಯಾಗುತ್ತಿದ್ದಂತೆಯೇ, ಪತ್ನಿಯ ಬದಲು ಆಕೆಯ ತಾಯಿಯ ಮೇಲೆ ಹೋತಾರಾಮ್​ಗೆ ಪ್ರೀತಿ ಹುಟ್ಟಿತ್ತು. ಅದೇ ಇನ್ನೊಂದೆಡೆ, ಮಗಳ ಗಂಡನ ಮೇಲೆಯೇ ಈ ಅತ್ತೆಗೂ ಮೋಹ ಶುರುವಾಗಿತ್ತು. ಹೀಗೆ ಪರಸ್ಪರ ಪ್ರೀತಿಸಿದ ಮೇಲೆ ಇಬ್ಬರೂ ಒಟ್ಟಿಗೇ ಬಾಳ್ವೆ ನಡೆಸಬೇಕು ಎಂದುಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರಿಬ್ಬರ ಸಂಬಂಧ ಶೀಘ್ರದಲ್ಲಿ ಅಕ್ಕಪಕ್ಕದವರಿಗೂ ತಿಳಿದುಬಂತು. ಕ್ರಮೇಣ ಈ ಸಂಬಂಧದ ಕುರಿತು ಗ್ರಾಮದಲ್ಲಿ ಗುಸುಗುಸು ಶುರುವಾಯಿತು. ಇವರನ್ನು ಗ್ರಾಮಸ್ಥರು ಅನುಮಾನದಿಂದ ನೋಡಲು ಶುರು ಮಾಡಿದಾಗ, ಇನ್ನು ಒಟ್ಟಿಗೇ ಬದುಕಲು ತಮಗೆ ಸಾಧ್ಯವಿಲ್ಲ, ಮದುವೆಯನ್ನೂ ಆಗುವಂತಿಲ್ಲ ಎಂದುಕೊಂಡು ಅರಿತರು ಇಬ್ಬರೂ. ಆದರೆ ಒಬ್ಬರನ್ನೊಬ್ಬರು ಬಿಟ್ಟು ಇರಲು ಸಾಧ್ಯವೇ ಆಗಲಿಲ್ಲ. ಆದ್ದರಿಂದ ಬಹುದೊಡ್ಡ ನಿರ್ಧಾರ ತೆಗೆದುಕೊಂಡು ಬಿಟ್ಟರು.

ಅದೇನೆಂದರೆ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರು. ಒಟ್ಟಿಗೇ ಇರಲು ಸಾಧ್ಯವಾಗದಿದ್ದ ಮೇಲೆ ಒಟ್ಟಿಗೇ ಸಾಯುವ ನಿರ್ಧಾರಕ್ಕೆ ಬಂದು ಗ್ರಾಮದ ಸಮೀಪ ಇರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಪಡಿತರ ಖರೀದಿಸುವ ನೆಪದಲ್ಲಿ ಇಬ್ಬರೂ ಮನೆಬಿಟ್ಟು ಹೋಗಿದ್ದರು. ಮರುದಿನವೇ ಅವರು ಶವವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು! ಈ ಕುರಿತು ಪೊಲೀಸ್ ಅಧಿಕಾರಿ ಪರ್ಬತ್ ಸಿಂಗ್ ಮಾಹಿತಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ