Recent Posts

Monday, January 20, 2025
ಬೆಳ್ತಂಗಡಿಸುದ್ದಿ

ಬೆಳ್ತಂಗಡಿಯಲ್ಲಿ OTP ಫ್ರಾಡ್: ಕಾಲ್ ಮಾಡಿ 15 ಸಾವಿರ ಲಪಟಾಯಿಸಿದ ಭೂಪ– ಕಹಳೆ ನ್ಯೂಸ್

ಬೆಳ್ತಂಗಡಿ: ಬ್ಯಾಂಕ್ ನಿಂದ ಕರೆ ಮಾಡುತ್ತಿರುವುದಾಗಿ ಹೇಳಿ ನಂಬಿಸಿ ಓಟಿಪಿ ಪಡೆದು ಮೂರು ಬಾರಿ ಹಣ ವರ್ಗಾಯಿಸಿ ವಂಚಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ‌ ನಿಡ್ಲೆ ಗ್ರಾಮದ ಬಿರ್ಲಾಜೆ ಮನೆಯ ಹರೀಶ್.ಬಿ ಎಂಬವರ ನಿಡ್ಲೆ ಕೆನರಾ ಬ್ಯಾಂಕ್ ಖಾತೆಯಿಂದ ಮೂರು ಬಾರಿ 10,236, 4,000, 500 ರೂಪಾಯಿ ಸೇರಿ ಒಟ್ಟು 15,000/- ಹಣವನ್ನು ದೆಹಲಿ ಮೂಲದ ಬ್ಯಾಂಕ್ ಖಾತೆಗೆ ವರ್ಗಾವಣೆಯಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹರೀಶ್.ಬಿ ಧರ್ಮಸ್ಥಳದಲ್ಲಿ ಉದ್ಯೋಗದಲ್ಲಿದ್ದು ಬುಧವಾರ ಮಧ್ಯಾಹ್ನ 6296877181 ನಂಬರಿನಿಂದ ಕರೆ ಮಾಡಿ ನಾವು ಬ್ಯಾಂಕ್ ಕಚೇರಿಯಿಂದ ಮಾತಾನಾಡುವುದು ಎಂದು ಹೇಳಿ ನಿಮ್ಮ ಖಾತೆಯನ್ನು ಬ್ಲಾಕ್ ಅಗಿದ್ದು ಅದನ್ನು ಸರಿಪಡಿಸುತ್ತೇವೆ ನಿಮಗೆ ಒಂದು OTP ಬಂದಿದೆ ಅದನ್ನು ಹೇಳಿ ಎಂದು ತಿಳಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅದರಂತೆ OTP ಹೇಳಿದ ಬಳಿಕ ತಮ್ಮ ಖಾತೆಯಿಂದ ಹಣ ವರ್ಗಾವಣೆಗೊಂಡ ಬಗ್ಗೆ ಮೊಬೈಲ್ ಗೆ ಮೆಸೇಜ್ ಬಂದಿದೆ ಅದನ್ನು ಪರಿಶೀಲನೆ ಮಾಡಿದಾಗ ಅನಾಮಿಕನ‌ ಕರೆಗೆ ಮೋಸ ಹೋಗಿರುವುದು ಗೊತ್ತಾಗಿದೆ.

ಈ ಬಗ್ಗೆ ಮೋಸ ಹೋಗಿರುವ ಹರೀಶ್.ಬಿ ನಿಡ್ಲೆ ಕೆನರಾ ಬ್ಯಾಂಕ್ ಗೆ ದೂರು ನೀಡಿದ್ದು ನಂತರ ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್ ಗೆ ದೂರು ನೀಡಿದ್ದಾರೆ.