Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಉಪ್ಪಿನಂಗಡಿ: ವಾಹನ ಅಡ್ಡ ಗಟ್ಟಿ ಯುವಕನ ಮೇಲೆ ಹಲ್ಲೆ – ಕಹಳೆ ನ್ಯೂಸ್

ಉಪ್ಪಿನಂಗಡಿ: ಯುವಕನೋರ್ವನನ್ನು ತಂಡವೊಂದು ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ಇಳಂತಿಲದಲ್ಲಿ ಜೂ.30ರಂದು ರಾತ್ರಿ ನಡೆದಿದೆ. ಇಳಂತಿಲದ ಮಂಜುನಾಥ್ ಹಲ್ಲೆಗೊಳಗಾದ ಯುವಕ.

ರಾತ್ರಿ 10.30 ರ ಹೊತ್ತಿಗೆ ಮಂಜುನಾಥ್ ಎಂಬವರು ಉಪ್ಪಿನಂಗಡಿಯಿಂದ ಮನೆಗೆ ತೆರಳುತ್ತಿರುವ ಹೊತ್ತಿಗೆ 2 ಜನ ಪರಿಚಯಸ್ಥರು ಹಾಗೂ 4 ಜನ ಅಪರಿಚಿತ ವ್ಯಕ್ತಿಗಳು ಬೈಕನ್ನು ಅಡ್ಡಗಟ್ಟಿ ಕತ್ತಿಯಿಂದ ಹಾಗೂ ದೊಣ್ಣೆ ಯಿಂದ ಹಲ್ಲೆ ನಡೆಸಿದ್ದು, ತದನಂತರ ತನ್ನ ತಮ್ಮನಿಗೆ ಕರೆ ಮಾಡಿ ತಮ್ಮ ಸ್ಥಳಕ್ಕೆ ಬಂದ ತಕ್ಷಣ ತಮ್ಮನ ಮೇಲೆ ಕೂಡ ಹಲ್ಲೆ ನಡೆಯಿಸಿದ್ದಾರೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಾಯಗೊಂಡ ಈತ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಹಲ್ಲೆ ನಡೆಸಿದವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ..

ಜಾಹೀರಾತು
ಜಾಹೀರಾತು
ಜಾಹೀರಾತು